Home latest ನೀನು ನನ್ನ ಮಗಳಲ್ಲ ಎಂದು ಹೇಳುತ್ತಲೇ ನಿರಂತರ ಅತ್ಯಾಚಾರ ಮಾಡಿದ ಪಾಪಿ ತಂದೆ| ಕಾಮುಕ ಪತಿಯನ್ನು...

ನೀನು ನನ್ನ ಮಗಳಲ್ಲ ಎಂದು ಹೇಳುತ್ತಲೇ ನಿರಂತರ ಅತ್ಯಾಚಾರ ಮಾಡಿದ ಪಾಪಿ ತಂದೆ| ಕಾಮುಕ ಪತಿಯನ್ನು ಪೊಲೀಸ್ ಠಾಣೆ ಮೆಟ್ಟಿಲೇರಿಸಿದ ಪತ್ನಿ!!!

Hindu neighbor gifts plot of land

Hindu neighbour gifts land to Muslim journalist

ತಂದೆಯೊಬ್ಬನು ತನ್ನ ಮಕ್ಕಳಿಗೆ ರಕ್ಷೆಯಾಗಿ ಇರಬೇಕು. ಆದರೆ ಆತನೇ ಭಕ್ಷಕನಾದರೇ ? ಇದಕ್ಕೆ ಉದಾಹರಣೆಯಾಗಿ ಹಾವೇರಿಯಲ್ಲಿ ಒಂದು ಘಟನೆ ನಡೆದಿದೆ. ಹಾವೇರಿ ಜಿಲ್ಲೆಯ ಹಂಸಭಾವು ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮದಲ್ಲಿ ಕಾಮುಕನೊಬ್ಬ ಪುತ್ರಿ ಮೇಲೆ ನಿರಂತರವಾಗಿ ಲೈಂಗಿಕ ದೌರ್ಜನ್ಯ ಮಾಡಿದ್ದಾನೆ.

ಬಾಲಕಿಗೆ ಪಿರಿಯಡ್ಸ್ ‌ನಿಂತ ಬಗ್ಗೆ ಅನುಮಾನಗೊಂಡ ತಾಯಿ ವಿಚಾರಿಸಿದ್ದಾಗ ಈ ಘಟನೆ‌ ಬೆಳಕಿಗೆ ಬಂದಿದೆ. ತಾನು ತಂದೆಯಿಂದ ನಿರಂತರ ಲೈಂಗಿಕ ದೌರ್ಜನ್ಯಕ್ಕೊಳಗಾಗಿ‌ದ್ದೇನೆ ಎಂದು ಅಮ್ಮನಲ್ಲಿ ಹೇಳಿದ್ದಾಳೆ.

ಪತ್ನಿ ಮನೆಯಿಂದ ಹೊರಗೆ ಹೋದ ಸಂದರ್ಭದಲ್ಲಿ ನೀನು ನನ್ನ ಮಗಳಲ್ಲ ಎಂದು ಚಿತ್ರಹಿಂಸೆ ನೀಡಿ ಅತ್ಯಾಚಾರ ಮಾಡಿದ್ದ ಎನ್ನುವ ವಿಷಯ ಬೆಳಕಿಗೆ ಬಂದಿದೆ.

ಈಗ ಬಾಲಕಿಯ ತಾಯಿ ಹಾಗೂ ಆಕೆಯ ಸಂಬಂಧಿಕರು ಹಂಸಭಾವಿ ಠಾಣೆಗೆ ದೂರು ನೀಡಿದ್ದು ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಾಲಕಿಯನ್ನು ಮಹಿಳಾ‌ ಸಾಂತ್ವನ ಕೇಂದ್ರಕ್ಕೆ ಕಳುಹಿಸಲಾಗಿದೆ.