Home latest ಹಿಜಾಬ್ ನಮ್ಮ ಕುಟುಂಬದ ವಿವಾದ, ಇದರಲ್ಲಿ ಪಾಕಿಸ್ತಾನ ತಲೆಹಾಕಬಾರದು ಎಂದು ಗುಡುಗಿದ ಕಾಂಗ್ರೆಸ್ ಮಹಿಳಾ ನಾಯಕಿ...

ಹಿಜಾಬ್ ನಮ್ಮ ಕುಟುಂಬದ ವಿವಾದ, ಇದರಲ್ಲಿ ಪಾಕಿಸ್ತಾನ ತಲೆಹಾಕಬಾರದು ಎಂದು ಗುಡುಗಿದ ಕಾಂಗ್ರೆಸ್ ಮಹಿಳಾ ನಾಯಕಿ ಫಾತಿಮಾ ಹುಸೇನ್ !!

Hindu neighbor gifts plot of land

Hindu neighbour gifts land to Muslim journalist

ನಮ್ಮ ರಾಜ್ಯದಲ್ಲಿ ನಡೆದಿರುವ ಹಿಜಾಬ್, ಕೇಸರಿ ಶಾಲು ವಿವಾದದಲ್ಲಿ ಪಾಕಿಸ್ತಾನ ತಲೆ ಹಾಕಬಾರದು. ಇದು ನಮ್ಮ ಕುಟುಂಬದ ಮಧ್ಯೆ ನಡೆಯುತ್ತಿರುವ ಸಮಸ್ಯೆ ಇದನ್ನು ನಾವೇ ಬಗೆಹರಿಸಿಕೊಳ್ಳುತ್ತೇವೆ ಎಂದು ರಾಯಚೂರು ಜಿಲ್ಲಾ ಮಹಿಳಾ ಕಾಂಗ್ರೆಸ್ ಘಟಕದ ನಾಯಕಿ ಫಾತಿಮಾ ಹುಸೇನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಿಜಾಬ್‍ಗೆ ಪಾಕಿಸ್ತಾನದಿಂದ ಬೆಂಬಲ ವಿಚಾರ ಹಿನ್ನೆಲೆ ನಮ್ಮ ದೇಶದ ಆಂತರಿಕ ವಿಚಾರದ ಬಗ್ಗೆ ಮಾತನಾಡಲು ಪಾಕಿಸ್ತಾನಕ್ಕೆ ಏನು ಹಕ್ಕಿದೆ. ಇದನ್ನು ನಾವೇ ಸರಿಪಡಿಸಿಕೊಳ್ಳುತ್ತೇವೆ. ನಿಮ್ಮ ದೇಶದಲ್ಲಿ ಭಯೋತ್ಪಾದನೆಯಂತಹ ವಿಚಾರಗಳಿವೆ. ಆ ಬಗ್ಗೆ ಮೊದಲು ಗಮನಹರಿಸಿ ಸರಿಪಡಿಸಿಕೊಳ್ಳಿ ಅಂತ ಕಿಡಿಕಾರಿದ್ದಾರೆ.

ಹಿಜಾಬ್ ಬಗ್ಗೆ ಮಾತನಾಡಲು ಯೋಗ್ಯತೆ ಬೇಕು. ನಮ್ಮ ದರ್ಗಾ ಮೇಲೂ ಕೇಸರಿ ಬಟ್ಟೆ ಹಾಕುತ್ತೇವೆ. ಧ್ವಜದಲ್ಲಿರುವ ಎಲ್ಲಾ ಬಣ್ಣಗಳು ಶಾಂತಿ ಪ್ರತೀಕ ನಮ್ಮನ್ನು ನಿಮ್ಮ ಅಕ್ಕ, ತಂಗಿಯರ ರೀತಿ ನೋಡಿ ಅಂತ ಫಾತಿಮಾ ಹುಸೇನ್ ಹೇಳಿದ್ದಾರೆ.