ಸಾಮಾಜಿಕ ಜಾಲತಾಣದಲ್ಲಿ ಕೊರೊನಾಗೆ ಮದ್ದು ಸಿಂಪಡಣೆ ಸುಳ್ಳು ಮಾಹಿತಿ | ಬಾವಿಗಳಿಗೆ ಮುಸುಕು ಹಾಕಿದ ಮುಗ್ದ ಜನತೆ

Share the Article

ಸಾಮಾಜಿಕ ಜಾಲತಾಣದಲ್ಲಿ ಕೊರೊನಾಗೆ ಮದ್ದು ಸಿಂಪಡಣೆ ಎಂಬ ಸುಳ್ಳು ಮಾಹಿತಿಯಿಂದ ತಮ್ಮ ಮನೆಯ ಬಾವಿಗಳಿಗೆ ಮುಸುಕು ಹಾಕಿದ ಜನತೆ ಮುಗ್ದತೆ ಮೆರೆದಿದ್ದಾರೆ.

ಕೊರೋನಾ ರೋಗದ ವೈರಸ್ ಗಾಳಿಯಿಂದ ನಿರ್ಮೂಲನೆಗೊಳ್ಳಲು ವಿಮಾನದಿಂದ ಮದ್ದು ಸಿಂಪಡಣೆ ಮಾಡಲಾಗುತ್ತದೆ ಎಂಬ ಮೆಸೇಜನ್ನು ಕೆಲ ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಕಿಡಿಗೇಡಿಗಳು ಹರಿಯಬಿಡುತ್ತಿದ್ದರು. ಇದನ್ನು ನಿಜವೆಂದು ನಂಬಿದ ಜನತೆ ಮುಂಜಾಗ್ರತಾ ಕ್ರಮವಾಗಿ ತಮ್ಮ ತಮ್ಮ ಬಾವಿಗಳಿಗೆ ತರ್ಪಲ್ ಮತ್ತು ಪ್ಲಾಸ್ಟಿಕ್ ಕವರ್ ಮಾಡಿದ್ದಾರೆ.

ತಾವು ಬಳಸುವ ನೀರು ಕಲುಷಿತವಾಗದಿರಲೆಂದು ಜಾಗ್ರತೆ ಜನರದು. ಇಂತಹ ಸುದ್ದಿಗಳು ರಾಜ್ಯದ ಹಲವೆಡೆಗಳಲ್ಲಿ ವಾಟ್ಸ್ ಆಪ್ ಗಳಲ್ಲಿ ಹರಿದಾಡಿದ ಪರಿಣಾಮ ವಿವಿಧ ಕಡೆ ಜನರು ತಮ್ಮ ಬಾವಿಯ ನೀರಿನ ರಕ್ಷಣೆಗೆ ಮುಂದಾಗಿದ್ದಾರೆ.

ಬೆಳ್ತಂಗಡಿ ತಾಲೂಕಿನ ಹಲವೆಡೆಯಲ್ಲಿ ಈ ವದಂತಿಯನ್ನು ನಂಬಿರುವ ಜನರು ಸಿಂಪಡಿಸಿದ ಮದ್ದು ತಮ್ಮ ಬಾವಿಗೆ ಬೀಳದಿರಲಿ ಎಂದು ಬಾವಿಗೆ ಬಟ್ಟೆ, ಪ್ಲಾಸ್ಟಿಕ್‌‌‌‌‌ ಹೊದಿಕೆ ಮೂಲಕ ಮುಚ್ಚಿದ್ದು, ಇದೀಗ ಆ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌‌ ಆಗುತ್ತಿದೆ

Leave A Reply

Your email address will not be published.