ಪ್ರಧಾನಿ ಕರೆ ನೀಡಿದ ಜನತಾ ಕರ್ಫ್ಯೂ | ದ.ಕ. ಸಂಪೂರ್ಣ ಸ್ತಬ್ದ
ಕೊರೋನಾ ವೈರಸ್ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ಮನವಿ ಮಾಡಿರುವ ಜನತಾ ಕರ್ಫ್ಯೂ ಯಶಸ್ವಿಯಾಗಿದೆ.
ಎಲ್ಲಾ ಪ್ರದೇಶದಲ್ಲಿ ಜನರು ಮನೆ ಬಿಟ್ಟು ಬರದಿರಿವುದು ಬಹಳ ವಿಶೇಷವಾಗಿತ್ತು. ಕೊರೊನಾ ತಡೆಯಲು ಪ್ರಧಾನಿ ಮನವಿಗೆ ಸ್ಪಂದಿಸಿದ್ದಾರೆ. ಒಟ್ಟಾರೆಯಾಗಿ ಜನತೆ ಕೊರೋನಾ ವ್ಯಾಧಿಯನ್ನು ಸೀರಿಯಸ್ ಆಗಿ ತೆಗೆದುಕೊಂಡಿದ್ದಾರೆ. ಬೇರೆ ಕಾರಣಗಳಿಗೆ ಬಂಧ್ ಮಾಡಲು ಹೇಳಿದಿದ್ದರೆ ಸಾವಿರ ರಾಜಕೀಯ ಬಂದಿರುತ್ತಿತ್ತು. ಈಗ ಎಲ್ಲವೂ ನಿಶ್ಯಬ್ದ. ರೋಗದ ಭಯವೇ ಅಂತದ್ದು.
ಪುತ್ತೂರು
ಸುಳ್ಯ
ಕಡಬ
‘
ಅಗತ್ಯವಿದ್ದರೆ ಮಾತ್ರ ಮನೆಯಿಂದ ಹೊರಗೆ ಬನ್ನಿ. ಸಾಧ್ಯವಾದರೆ ಎಲ್ಲಾ ಕೆಲಸಗಳನ್ನು ಮನೆಯಲ್ಲೇ ಮಾಡಿ. ಇದೇ ಮಾ.22ರಂದು ಯಾರೂ ಹೊರಗೆ ಹೊರಡಬೇಡಿ. ಬೆಳಗ್ಗೆ 7 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಜನರಿಂದ ಜನರಿಗಾಗಿ ಜನತಾ ಕರ್ಫ್ಯೂ ಕಡ್ಡಾಯವಾಗಿ ಪಾಲನೆ ಮಾಡಿ ‘’ ಎಂದು ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ್ದರು.
ಸದಾ ಇರುವೆ ಗೂಡಿನ ಥರ ಗಜಿ ಬಿಜಿ ಗಿಜಿ ಗುಡುವ ಬೆಂಗಳೂರಿನ ಮಜೆಸ್ಟಿಕ್, ಎಂ ಜಿ ರೋಡ್, ಬ್ರಿಗೇಡ್ ರೋಡು, ಕಲಾಸಿ ಪಾಳ್ಯ ಮುಂತಾದ ಪ್ರದೇಶಗಳಲ್ಲೂ ನೀರವ ನಿಶ್ಯಬ್ದ !
ಅದರಂತೆ ಜನತೆ ನಡೆದುಕೊಂಡಿದ್ದಾರೆ. ಆದರೆ ಕಡಬ ತಾಲೂಕಿನ ಕಲ್ಲುಗುಡ್ಡೆಯಲ್ಲಿ ವೈನ್‌ಶಾಪ್ ತೆರೆದುಕೊಂಡಿದೆ ಎಂಬ ಮಾಹಿತಿ ದೊರಕಿದೆ.