ಒಂದೇ ದಿನದಲ್ಲಿ ಫೇಸ್ಬುಕ್ಗೆ 16 ಲಕ್ಷ ಕೋಟಿ ರೂ. ನಷ್ಟ
18 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಫೇಸ್ ಬುಕ್ ಸಕ್ರಿಯ ಬಳಕೆದಾರರ ಸಂಖ್ಯೆಯಲ್ಲಿ ಭಾರೀ ಇಳಿಕೆ ಕಂಡುಬಂದಿದೆ. 3 ತಿಂಗಳ ಅವಧಿಯಲ್ಲಿ ಬಳಕೆದಾರರ ಸಂಖ್ಯೆ 192.9 ಕೋಟಿಗೆ ಕುಸಿದಿದ್ದು, ಈ ಹಿಂದಿನ ತ್ರೈಮಾಸಿಕ ಅವಧಿಯಲ್ಲಿ 193 ಕೋಟಿಯಷ್ಟು ಬಳಕೆದಾರರಿದ್ದರು ಎಂದು ಮಾತೃಸಂಸ್ಥೆ ಮೆಟಾ ಫೇಸ್ಬುಕ್ ಸಂಸ್ಥೆಯ ಬಹಿರಂಗಪಡಿಸಿದೆ.
ಮೆಟಾ ಹಣಕಾಸು ಅಧಿಕಾರಿ ಡೇವಿಡ್ ವೆಹಾರ್ ಹೇಳುವ ಪ್ರಕಾರ – ಭಾರತದಲ್ಲಿ ಡೇಟಾ ಪ್ಯಾಕೇಜ್ ಬೆಲೆಯಲ್ಲಿನ ಹೆಚ್ಚಳವಾಗಿದೆ. ಹೀಗಾಗಿ ಒಟ್ಟಾರೆಯಾಗಿ ದೇಶದಾದ್ಯಂತ ಫೇಸ್ಬುಕ್ ಬಳಕೆದಾರರ ಸಂಖ್ಯೆಯು ಕೂಡ ಕಡಿಮೆಯಾಗುತ್ತಾ ಬರುತ್ತಿದೆ.
ನಾವು ಈ ಅಂಶಗಳ ಜೊತೆಗೆ ಸ್ಪರ್ಧೆಯನ್ನು ಮಾಡಬೇಕಾಗಿದೆ. ಈ ಬೆಳವಣೆಗೆ ಹೊಸ ಬಳಕೆದಾರರ ಮೇಲೆ ನೆಗಿಟಿವ್ ಪ್ರಭಾವಬೀರುತ್ತದೆ ಎಂದು ಹೇಳಿದ್ದಾರೆ. ಮೆಟಾ ಸಂಸ್ಥೆ ವರ್ಚುವಲ್ ರಿಯಾಲಿಟಿ ಮೇಲೆ ಹೆಚ್ಚಿನ ಹೂಡಿಕೆ ಮಾಡಿದೆ.
ಟಿಕ್ಟಾಕ್ ಮತ್ತು ಯೂಟ್ಯೂಬ್ನಿಂದ ಹೆಚ್ಚಿದ ಸ್ಪರ್ಧೆ ನೀಡುತ್ತಿದೆ. ಇದರಿಂದ ಫೇಸ್ಬುಕ್ ಜಾಹೀರಾತುಗಳು ಕಡಿಮೆಯಾಗಬಹುದಾದ ಸಾಧ್ಯತೆಯಿದೆ ಎಂದು ಕಂಪನಿ ತಿಳಿಸಿದೆ.