ಬಯೋಡಿಗ್ರೆಡೆಬಲ್ ಮಾಸ್ಕ್ ಆವಿಷ್ಕರಿಸಿದ ಬೆಂಗಳೂರಿನ ವಿಜ್ಞಾನಿಗಳು | ತೊಳೆದು ಮರುಬಳಕೆ ಮಾರಬಹುದಾದ ಮಾಸ್ಕ್ |
ಬೆಂಗಳೂರು : ಕೊರೊನಾ ಓಮ್ರಿಕಾನ್ ರೂಪಾಂತರಿಯ ವಿರುದ್ಧ ಹೋರಾಡಲು ಬೆಂಗಳೂರಿನ ವಿಜ್ಞಾನಿಗಳು ಸ್ವಯಂ ಸೋಂಕುನಿವಾರಕ, ಬಯೋಡಿಗ್ರೆಡಬಲ್ ಮಾಸ್ಕ್ ನ್ನು ತಯಾರಿಸಿದ್ದಾರೆ.
ಈ ಮಾಸ್ಕ್ ತಾಮ್ರ- ಆಧಾರಿತ ನ್ಯಾನೊಪರ್ಟಿಕಲ್ – ಲೇಪಿತ ಆಂಟಿವೈರಲ್ ಆಗಿದೆ. ಇದರ ಮೂಲಕ ಸರಾಗವಾಗಿ ಉಸಿರಾಡಬಲ್ಲ ಹಾಗೂ ತೊಳೆದು ಮರುಬಳಕೆ ಮಾಡಬಹುದಾದ ಮಾಸ್ಕ್ ಇದಾಗಿದೆ. ಇವು ಕೊರೊನಾದಿಂದ ರಕ್ಷಣೆ ನೀಡುವುದು ಮಾತ್ರವಲ್ಲದೇ ಇನ್ನಿತರ ವೈರಾಣು, ಬ್ಯಾಕ್ಟೀರಿಯಾ ಸೋಂಕಿನಿಂದಲೂ ರಕ್ಷಣೆ ಒದಗಿಸಲಿದೆ.
ಸಾಮಾನ್ಯವಾಗಿ ಈಗ ಬಳಕೆ ಮಾಡುತ್ತಿರುವ ಮಾಸ್ಕ್ ವೈರಾಣುಗಳನ್ನು ಮನುಷ್ಯನ ದೇಹವನ್ನು ಪ್ರವೇಶಿಸದಂತೆ ತಡೆಗಟ್ಟುತ್ತದೆ ಅಷ್ಟೇ. ಆದರೆ ವೈರಾಣುವನ್ನು ಕೊಲ್ಲುವುದಿಲ್ಲ.
ಜನಸಂದಣಿ ಹೆಚ್ಚಿರುವ ಆಸ್ಪತ್ರೆ, ವಿಮಾನ ನಿಲ್ದಾಣ, ಸ್ಟೇಷನ್ ಗಳು, ಶಾಪಿಂಗ್ ಮಾಲ್ ಗಳಲ್ಲಿ ವೈರಾಣು ಹರಡುವಿಕೆ ನಿಯಂತ್ರಣ ಕಷ್ಟ. ಈಗ ಕಂಡು ಹುಡುಕಿರುವ ಮಾಸ್ಕ್ ಗಳು ಕಾಪರ್ ಆಧಾರಿತ, 20 ನ್ಯಾನೋಮೀಟರ್ ನಷ್ಟು ನ್ಯಾನೋಪಾರ್ಟಿಕಲ್ ಗಳನ್ನು ಫ್ಲೇಮ್ ಸ್ಪ್ರೇ ಪೈರೋಲೊಸಿಸ್ ( ಎಫ್ ಎಸ್ ಪಿ) ಪ್ರೊಸೆಸಿಂಗ್ ಸಂಸ್ಕರಣಾ ಸೌಲಭ್ಯ ಹೊಂದಿದ್ದು, ಸ್ವಯಂ ಸೋಂಕು ನಿವಾರಣಾ ಸಾಮರ್ಥ್ಯವನ್ನು ಹೊಂದಿದೆ.
ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಂಶೋಧನಾ ಅಭಿವೃದ್ಧಿ ಕೇಂದ್ರವಾಗಿರುವ ಪೌಡರ್ ಮೆಟಲರ್ಜಿ ಮತ್ತು ನ್ಯೂ ಮೆಟೀರಿಯಲ್ಸ್ ( ARCI) ಗಾಗಿ ಅಂತರಾಷ್ಟ್ರೀಯ ಸುಧಾರಿತ ಸಂಶೋಧನಾ ಕೇಂದ್ರ ಹಾಗೂ ಬೆಂಗಳೂರು ಮೂಲದ ಸೆಲ್ಯುಲರ್ ಮತ್ತು ಮಾಲಿಕ್ಯುಲರ್ ಬಯಾಲಜಿ ಕೇಂದ್ರ ಮತ್ತು ರೆಸಿಲ್ ಕೆಮಿಕಲ್ಸ್ ನ ಸಹಯೋಗದಲ್ಲಿ ಈ ವಿಶೇಷ ಮಾಸ್ಕ್ ಅಭಿವೃದ್ಧಿಪಡಿಸಲಾಗಿದೆ.