ಫೇಸ್ಬುಕ್ ಮೆಸೆಂಜರ್ ಗಳ ಸ್ಕ್ರೀನ್ ಶಾಟ್ ತೆಗೆದುಕೊಳ್ಳಬೇಡಿ – ಮಾರ್ಕ್ ಜುಕರ್ ಬರ್ಗ್ ಎಚ್ಚರಿಕೆ
ಫೇಸ್ ಬುಕ್ ಮೆಸೆಂಜರ್ ನಲ್ಲಿ ಚಾಟ್ ಗಳ ಸ್ಕ್ರೀನ್ ಶಾಟ್ ಗಳನ್ನು ತೆಗೆದುಕೊಳ್ಳಬಾರದು ಎಂಬ ಎಚ್ಚರಿಕೆಯ ಸಂದೇಶವನ್ನು ನೀಡಲಾಗುತ್ತಿದೆ. ಫೇಸ್ ಬುಕ್ ತನ್ನ ಹೊಸ ನವೀಕರಣದ ಭಾಗವಾಗಿ ಮೆಸೆಂಜರ್ ಸೇವೆಯಲ್ಲಿ ‘ ಸ್ಕ್ರೀನ್ ಶಾಟ್’ನ್ನು ಪರಿಚಯಿಸಿದೆ. ವೈಯಕ್ತಿಕ ಅಥವಾ ಡಿಲೀಟ್ ಮಾಡಬೇಕಾಗಿರುವ ಸಂದೇಶಗಳನ್ನು ಕೂಡಲೇ ಸ್ಕ್ರೀನ್ ಶಾಟ್ ತೆಗೆದುಕೊಳ್ಳುವ ಮಾಹಿತಿಯನ್ನು ಇದು ಇತರರಿಗೆ ತಿಳಿಸುತ್ತದೆ. ಇವುಗಳ ಸ್ಕ್ರೀನ್ ಶಾಟ್ ತೆಗೆದುಕೊಂಡರೆ ಈ ಕುರಿತ ನೋಟಿಫಿಕೇಶನ್ ಮತ್ತೊಂದು ಬದಿಯ ಮೆಸೆಂಜರ್ ಬಳಕೆದಾರರಿಗೆ ಕಳುಹಿಸಲಾಗುತ್ತದೆ.
ಎಂಡ್ ಟು ಎಂಟ್ ಎನ್ ಕ್ರಿಪ್ಟ್ ಮೋಡ್ ನಲ್ಲಿರುವ ಚಾಟ್ ಗಳು ಅವುಗಳನ್ನು ಓದಿದ ತಕ್ಷಣವೇ ಮರೆಯಾಗುತ್ತದೆ. ಈ ಮೆಸೇಜ್ ಗಳ ಸ್ಕ್ರೀನ್ ಶಾಟ್ ನೀವು ತೆಗೆದುಕೊಳ್ಳಬಹುದು. ಹೀಗೆ ಸ್ಕ್ರೀನ್ ಶಾಟ್ ತೆಗೆದುಕೊಂಡರೆ ಇನ್ನೊಬ್ಬ ಫೇಸ್ ಬುಕ್ ಮೆಸೆಂಜರ್ ಬಳಕೆದಾರರಿಗೆ ನೀವು ಸ್ಕ್ರೀನ್ ಶಾಟ್ ತಗೊಂಡಿದ್ದೀರಿ ಎನ್ನುವ ಮೆಸೇಜ್ ಹೋಗುತ್ತದೆ. ಸಂಕ್ಷಿಪ್ತವಾಗಿ ಹೇಳಬೇಕೆಂದರೆ ಫೇಸ್ ಬುಕ್ ಬಳಕೆದಾರರು ತಮ್ಮ ಸ್ಮಾರ್ಟ್ ಫೋನಿನಲ್ಲಿ ಸ್ಕ್ರೀನ್ ಶಾಟ್ ತೆಗೆದುಕೊಂಡರೆ, ಫೇಸ್ ಬುಕ್ ನಿಮ್ಮ ಈ ಕೆಲಸದ ಬಗ್ಗೆ ಇನ್ನೊಬ್ಬ ವ್ಯಕ್ತಿಗೆ ಮಾಹಿತಿ ತಿಳಿಸುತ್ತದೆ.
ಎಂಡ್ ಟು ಎಂಡ್ ಎನ್ ಕ್ರಿಪ್ಟ್ ಮಾಡಿದ ಮೆಸೆಂಜರ್ ಚಾಟ್ ಗಳು ಹೊಸ ಅಪ್ಡೇಟ್ ಆಗಿದ್ದರಿಂದ, ಡಿಲೀಟ್ ಆಗುವ ಅಥವಾ ಕಣ್ಮರೆಯಾಗುವ ಮೆಸೇಜ್ ಗಳ ಸ್ಕ್ರೀನ್ ಶಾಟ್ ತೆಗೆದುಕೊಂಡರೆ ನೀವು ನೋಟಿಫಿಕೇಶನ್ ಪಡೆಯುತ್ತೀರಿ ಎಂದು ಮಾರ್ಕ್ ಜುಕರ್ ಬರ್ಗ್ ಫೇಸ್ಬುಕ್ ಅಪ್ ಡೇಟ್ ಬಗ್ಗೆ ಬರೆದಿದ್ದಾರೆ.