60 ವರ್ಷದ ಮುದುಕ 16 ವರ್ಷದ ಬಾಲಕಿಗೆ ಲವ್ ಲೆಟರ್ ಕೊಟ್ಟಾಗ..!

Share the Article

ಚೆನ್ನೈ:ಯುವಕರು ಯುವತಿಯರಿಗೆ ಲವ್ ಲೆಟರ್ ಕೊಡೋದನ್ನ ನೋಡಿರಬಹುದು. ಇದು ಸಾಮಾನ್ಯವಾಗಿದೆ. ಆದ್ರೆ ಇಲ್ಲೊಬ್ಬ ತನ್ನ ಮುದಿವಯಸ್ಸಲ್ಲು ತನ್ನ ಯವ್ವನ ಪ್ರದರ್ಶಿಸಿದ್ದಾರೆ. ಬಳಿಕ ಆತನಿಗೆ ಕಂಬಿ ಏನಿಸೊ ಕೆಲಸ!

ಹೌದು 60 ವರ್ಷ ದಾಟಿದ ವೃದ್ಧನೊಬ್ಬ 16 ವರ್ಷದ ಬಾಲಕಿಯೊಬ್ಬಳಿಗೆ ಲವ್‌ ಲೆಟರ್‌ ನೀಡಿದ ಘಟನೆಯೊಂದು ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದಿದೆ.

66 ವರ್ಷದ ಮೊಹಮ್ಮದ್‌ ಬಾ ಹಿರ್‌ ಬಾಷಾ ಎಂಬಾತನೇ ಈ ಯುವ ವೃದ್ಧ.ವೃದ್ಧ ನೀಡಿದ ಪ್ರೇಮಪತ್ರದಿಂದ ಶಾಕ್‌ ಆದ ಬಾಲಕಿ ಅದನ್ನು ತನ್ನ ತಾಯಿಗೆ ತೋರಿಸಿದ್ದಾಳೆ. ಬಳಿಕ ಪೋಷಕರು ಬಾಷಾನನ್ನು ತರಾಟೆಗೆ ತೆಗೆದುಕೊಂಡಿದ್ದರಿಂದ ಆತ ಕ್ಷಮಾಪಣೆ ಕೇಳಿದ್ದ. ಆದರೆ, ಇಷ್ಟಕ್ಕೇ ಸುಮ್ಮನಾಗದ ಆತ, ಬಾಲಕಿಗೆ ಮತ್ತೊಮ್ಮೆ ಲವ್‌ ಲೆಟರ್‌ ಕೊಟ್ಟು ಬೆದರಿಕೆ ಹಾಕಿದ್ದ. ಬಳಿಕ ಈ ಪ್ರಕರಣ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದು, ಬಾಷಾ ಈಗ ಸೆಂಟ್ರಲ್‌ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾನೆ.

Leave A Reply