ಅನಾಥವಾಗಿ ಬಿದ್ದಿದ್ದ ನವಜಾತ ಶಿಶುವಿನ ತಲೆಯನ್ನು ಕಿತ್ತು ತಿಂದು ಹಾಕಿದ ಬೀದಿ ನಾಯಿಗಳು

Share the Article

ಹಾಸನ:ಇತ್ತೀಚೆಗೆ ಪುಟ್ಟ ಕಂದಮ್ಮಗಳನ್ನು ಮನಸ್ಸೇ ಇಲ್ಲದ ಮೃಗಗಳಂತೆ ಎಲ್ಲೆಂದರಲ್ಲಿ ಬಿಟ್ಟು ಹೋಗೋ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಇದೀಗ ಅನಾಥವಾಗಿದ್ದ ನವಜಾತ ಶಿಶುವೊಂದನ್ನು ಬೀದಿ ನಾಯಿಗಳು ಕಿತ್ತು ತಿಂದು ಹಾಕಿರುವ ಮನಕಲಕುವ ಘಟನೆ ಹಾಸನ ಜಿಲ್ಲೆಯ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ ನಡೆದಿದೆ.

ಈ ನವಜಾತ ಶಿಶುವನ್ನು ಯಾರೋ ಪಾಪಿಗಳು ಎಸೆದು ಹೋಗಿರುವ ಶಂಕೆ ವ್ಯಕ್ತವಾಗಿದ್ದು,ಅನಾಥವಾಗಿ ಬಿದ್ದ ಮಗುವನ್ನು ಬೀದಿ ನಾಯಿಗಳು ಕಿತ್ತು ತಿಂದಿದೆ.ತಲೆಯಿಲ್ಲದ ಮಗುವಿನ ಮೃತದೇಹ ಕಂಡು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.ಸ್ಥಳಕ್ಕೆ ಆಗಮಿಸಿ ಪೊಲೀಸರು‌ ಮಗುವಿನ ಮೃತದೇಹವನ್ನು ವಶಕ್ಕೆ ಪಡೆದಿದ್ದಾರೆ.

Leave A Reply