Home latest ಉಡುಪಿ ಸರ್ಕಾರಿ ಕಾಲೇಜಿನಲ್ಲಿ ಹಿಜಾಬ್ ಪ್ರಕರಣ, ಕುದುಲೂರು ಎಸ್ ಡಿ ಪಿ ಐ ಕಾರ್ಯಕರ್ತನಿಂದ ಹಿಂದೂ...

ಉಡುಪಿ ಸರ್ಕಾರಿ ಕಾಲೇಜಿನಲ್ಲಿ ಹಿಜಾಬ್ ಪ್ರಕರಣ, ಕುದುಲೂರು ಎಸ್ ಡಿ ಪಿ ಐ ಕಾರ್ಯಕರ್ತನಿಂದ ಹಿಂದೂ ಪರ ಸಂಘಟನೆ ವಿರುದ್ದ ತನ್ನ ಟ್ವಿಟರ್ ನಲ್ಲಿ ಪೋಸ್ಟ್ , ದೂರು ನೀಡಿದ ಶ್ರೀ ರಾಮ ಗೆಳೆಯರ ಬಳಗದ ಪದಾಧಿಕಾರಿಗಳು.

Hindu neighbor gifts plot of land

Hindu neighbour gifts land to Muslim journalist

ಉಡುಪಿಯ ಸರ್ಕಾರಿ ಕಾಲೇಜಿನಲ್ಲಿ ನಡೆಯುತ್ತಿರುವ ಹಿಜಾಬ್ ಪ್ರಕರಣಕ್ಕೆ ಸಂಬಂದಪಟ್ಟಂತೆ ಕಡಬ ತಾಲೂಕಿನ ಕೊಯಿಲ ಗ್ರಾಮದ ಕುದುಲೂರು ಎಂಬಲ್ಲಿನ ಎಸ್ ಡಿ ಪಿ ಐ ಕಾರ್ಯಕರ್ತರೊರ್ವ ಹಿಂದೂ ಪರ ಸಂಘಟನೆಯ ವಿರುದ್ದ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೊಸ್ಟ್ ಹಂಚಿಕೊಂಡಿದ್ದಾರೆ ಎಂದು ಅರೋಪಿಸಿ ಕೊಯಿಲ ಗ್ರಾಮದ ಅಯೋಧ್ಯಾನಗರ ಶ್ರೀ ರಾಮ ಗೆಳೆಯರ ಬಳಗದ ವತಿಯಿಂದ ಕಡಬ ಠಾಣೆಗೆ ಶನಿವಾರ ದೂರು ನೀಡಲಾಗಿದೆ. ಗೋಳಿತ್ತಡಿಯ ಗ್ಯಾರೇಜು ಒಂದರಲ್ಲಿ ಕೆಲ್ಸ ಮಾಡುತ್ತಿರುವ ಎಸ್ ಡಿ ಪಿ ಐ ಸಕ್ರಿಯ ಕಾರ್ಯಕರ್ತ ಕುದುಲೂರು ನಿವಾಸಿ ಝಿಯಾದ್ ಎಂಬುವವರು ತನ್ನ ಟ್ವಿಟರ್ ಖಾತೆಯಲ್ಲಿ “ಹೆಣ್ಣು ಮಕ್ಕಳು ಹಿಜಾಬ್ ಹಾಕಿದ ಕಾರಣವಾಗಿ ಸಂಘಿ ಮಕ್ಕಳು ಶಾಲು ಧರಿಸಿ ಬರುವುದಕ್ಕಿಂತ ಉತ್ತಮ ಲಿಂಗ ಬದಲಾಯಿಸಿ ನಪುಂಸಕರಾಗಿ ಬನ್ನಿ ” ಎನ್ನುವ ಸಂದೇಶವನ್ನು ಹಂಚಿಕೊಂಡಿದ್ದಾರೆ. ಈ ರೀತಿಯ ಸಂದೇಶ ರವಾನೆಯಿಂದ ಸಮಾಜದಲ್ಲಿ ಅಶಾಂತಿಗೆ ಕಾರಣವಾಗುತ್ತದೆ. ಈ ನಿಟ್ಟಿನಲ್ಲಿ ಈತನ ವಿರುದ್ದ ಸೂಕ್ತ ಕ್ರಮವನ್ನು ಜರುಗಿಸಬೇಕೆಂದು ಆಗ್ರಹಿಸಿ ಶ್ರೀ ರಾಮ ಗೆಳೆಯರ ಬಳಗದ ಪದಾಧಿಕಾರಿಗಳು ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ .