Home Interesting ಈಕೆಗೆ ಮದುವೆಯಾಗುವುದೇ ಕೆಲಸ | 28ರ ಹರೆಯದ ಯುವತಿ ಈಗಾಗಲೇ 8ಕ್ಕೂ ಹೆಚ್ಚು ಮಂದಿಯ ಮದುವೆಯಾಗಿ...

ಈಕೆಗೆ ಮದುವೆಯಾಗುವುದೇ ಕೆಲಸ | 28ರ ಹರೆಯದ ಯುವತಿ ಈಗಾಗಲೇ 8ಕ್ಕೂ ಹೆಚ್ಚು ಮಂದಿಯ ಮದುವೆಯಾಗಿ ಕೈಕೊಟ್ಟಿದ್ದಾಳೆ

Hindu neighbor gifts plot of land

Hindu neighbour gifts land to Muslim journalist

ಭೋಪಾಲ್‌ನ ಯುವತಿಯೊಬ್ಬಳು ಮದುವೆಯಾಗಿ ಗಂಡನಿಗೆ ಕೈಕೊಟ್ಟು ಓಡಿ ಹೋಗುವುದನ್ನೇ ಕಾಯಕವಾಗಿ ಮಾಡಿಕೊಂಡಿದ್ದಾಳೆ,28ರ ಹರೆಯದ ಈಕೆ ಈಗಾಗಲೇ ಎಂಟು ಜನರಿಗೂ ಅಧಿಕ ಮಂದಿಯನ್ನು ಮದುವೆಯಾಗಿ ಕೈಕೊಟ್ಟು ಓಡಿಹೋಗಿದ್ದಾಳೆ.

ಈಕೆ ಪೊಲೀಸರಿಗೆ ಸಿಕ್ಕಿ ಬೀಳುವ ಮೂಲಕ ಈಕೆಯ ಬಣ್ಣ ಬಯಲಾಗಿದೆ.

ಈಕೆಯ ಹೆಸರು ಊರ್ಮಿಳಾ ಅಹಿರ್ವಾರ್ ಅಲಿಯಾಸ್ ರೇಣು ರಜಪೂತ್.
ಈಕೆ ಒಬ್ಬರಾದ ಬಳಿಕ ಒಬ್ಬರು ಪುರುಷರನ್ನು ಮದುವೆಯಾಗಿ ಚಿನ್ನಾಭರಣ ಮತ್ತು ಹಣದೊಂದಿಗೆ ಓಡಿಹೋಗಿದ್ದಳು. ಆಕೆಯ ವಂಚನೆಯ ಜಾಡು ಹಿಡಿದ ಪೊಲೀಸರು, ಆಕೆಯೊಂದಿಗೆ ಕೃತ್ಯಗಳಿಗೆ ಸಹಕರಿಸಿದ ಇತರ ಮೂವರನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಅರ್ಚನಾ ಬರ್ಮನ್ ಅಲಿಯಾಸ್ ಅರ್ಚನಾ ರಜಪೂತ್ (40), ಭಾಗಚಂದ್ ಕೋರಿ (22) ಮತ್ತು ಅಮರ್ ಸಿಂಗ್ (50) ಎಂದು ಗುರುತಿಸಲಾಗಿದೆ.

ಊರ್ಮಿಳಾ ಇತ್ತೀಚೆಗೆ ಸಿಯೋನಿ ಜಿಲ್ಲೆಯ ನಿವಾಸಿ 41 ರ ಹರೆಯದ ವ್ಯಕ್ತಿ ದಶರಥ್ ಪಟೇಲ್ ಎಂಬಾತನನ್ನು ಮದುವೆಯಾಗಿ ಕೈಕೊಟ್ಟು ಚಿನ್ನಾಭರಣಗಳೊಂದಿಗೆ ಪರಾರಿಯಾಗಿದ್ದಳು.ಆತನ ದೂರಿನಂತೆ ಒಮ್ಟಿ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಎಸ್‌ಎಸ್ ಬಘೆಲ್ ತನಿಖೆ ನಡೆಸಿದಾಗ ಊರ್ಮಿಳಾಳ ಸಂಚು ಬಯಲಾಗಿದೆ.

ಆಕೆಯನ್ನು ಬಂಧಿಸಿದ ನಂತರ, ಈ ಹಿಂದೆ ಇತರ ಏಳು ಪುರುಷರನ್ನು ವಂಚಿಸಿದ್ದಾಗಿ ಒಪ್ಪಿಕೊಂಡಿದ್ದಾಳೆ. ಒಬ್ಬ ವ್ಯಕ್ತಿಯನ್ನು ಮದುವೆಯಾಗಿ ಕೆಲವು ದಿನಗಳ ನಂತರ ಚಿನ್ನಾಭರಣ ಮತ್ತು ನಗದಿನೊಂದಿಗೆ ಪರಾರಿಯಾಗುವುದನ್ನೇ ಕಾಯಕ ಮಾಡಿಕೊಂಡಿದ್ದಳು.

ಈಕೆ ರಾಜಸ್ಥಾನದ ಜೈಪುರ, ಕೋಟಾ ಮತ್ತು ಧೋಲ್‌ಪುರ ಮತ್ತು ಮಧ್ಯಪ್ರದೇಶದ ದಾಮೋಹ್ ಮತ್ತು ಸಾಗರ್‌ನಲ್ಲಿ ಪುರುಷರನ್ನು ವಂಚಿಸಿದ್ದಾಳೆ ಎಂದು ಪೊಲೀಸ್ ಅಧಿಕಾರಿ ಎಸ್‌.ಎಸ್.ಬಘೆಲ್ ತಿಳಿಸಿದ್ದಾರೆ.