ಮಂಗಳೂರು: ಖಾಸಗಿ ಕಾಲೇಜು ಬಳಿ ತಲವಾರು ಹಿಡಿದು ಆತಂಕ ಸೃಷ್ಟಿಸಿದ್ದ ಯುವಕನ ಬಂಧನ

Share the Article

ಮಂಗಳೂರು:ಬಲ್ಲಾಳ್‌ಬಾಗ್‌ನ ಖಾಸಗಿ ಕಾಲೇಜೊಂದರ ಬಳಿ ಯುವಕರ ತಂಡ ಹಾಗೂ ಕೇರಳ ವಿದ್ಯಾರ್ಥಿಗಳ ನಡುವೆ ನಡೆದ ಮಾತಿನ ಚಕಮಕಿ ಪ್ರಕರಣಕ್ಕೆ ಸಂಬಂಧಿಸಿದಂತೆ ತಲವಾರು ಹಿಡಿದು ಆತಂಕ ಸೃಷ್ಟಿಸಿದ್ದವರ ಪೈಕಿ ಯುವಕನೋರ್ವನನ್ನು ಬರ್ಕೆ ಪೊಲೀಸರು ನಿನ್ನೆ ಬಂಧಿಸಿದ್ದಾರೆ.

ಆರೋಪಿಯನ್ನು ಬಲ್ಲಾಳ್ ಬಾಗ್ ಸಮೀಪದ ವಿವೇಕನಗರ ನಿವಾಸಿ ವಿಶ್ವನಾಥ್ (22) ಎಂದು ಗುರುತಿಸಲಾಗಿದೆ.

ಬುಧವಾರ ಮಧ್ಯಾಹ್ನ ಯುವಕರು ಮತ್ತು ವಿದ್ಯಾರ್ಥಿಗಳ ಮಧ್ಯೆ ಜಗಳ ನಡೆದಿದ್ದು,ಇದಾದ ಕೆಲವೇ ಹೊತ್ತಿನಲ್ಲಿ ಯುವಕರಿಬ್ಬರು ಸ್ಕೂಟರ್‌ನಲ್ಲಿ ತಲವಾರು ಹಿಡಿದುಕೊಂಡು ಕಾಲೇಜು ಆವರಣದ
ಬಳಿ ಬಂದಿದ್ದರು.ವಿದ್ಯಾರ್ಥಿಗಳು ಅದನ್ನು ಮೊಬೈಲ್‌ನಲ್ಲಿ ವೀಡಿಯೋ ಮಾಡಿದ್ದರು. ಬಳಿಕ ಬರ್ಕೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದರಲ್ಲದೆ, ವಿಡಿಯೋದ ಆಧಾರದಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ.

Leave A Reply