Home International ಕೇವಲ 16 ಸೆಕೆಂಡ್ ಮಾಸ್ಕ್ ತೆಗೆದಿದ್ದಕ್ಕೆ 2 ಲಕ್ಷ ರೂ ದಂಡ !!!

ಕೇವಲ 16 ಸೆಕೆಂಡ್ ಮಾಸ್ಕ್ ತೆಗೆದಿದ್ದಕ್ಕೆ 2 ಲಕ್ಷ ರೂ ದಂಡ !!!

Hindu neighbor gifts plot of land

Hindu neighbour gifts land to Muslim journalist

ಕೊರೊನಾ ನಿಯಾಮವಳಿಯನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕೆಂಬ ನಿಯಮಾವಳಿ ಎಲ್ಲಾ ಕಡೆ ಇದೆ. ವಿದೇಶಗಳು ಕೂಡಾ ಇದಕ್ಕೆ ಹೊರತಾಗಿಲ್ಲ. ಎಲ್ಲರೂ ಮಾಸ್ಕ್ ಧರಿಸಬೇಕು ಎಂಬ ನಿಯಮವನ್ನು ಕಟ್ಟು ನಿಟ್ಟಾಗಿ ಜಾರಿಗೊಳಿಸಿದೆ ಎಲ್ಲ ಕಡೆಗಳಲ್ಲಿ.

ಯುಕೆಯಲ್ಲಿ ಕೂಡಾ ಕೊರೊನಾ ಹೆಚ್ಚಾಗಿರುವುದರಿಂದ ಮಾಸ್ಕ್ ಧರಿಸುವ ನಿಯಮ ಜಾರಿಯಲ್ಲಿದೆ. ಹೊರಾಂಗಣದಲ್ಲಿ ಕೂಡಾ ಕಟ್ಟುನಿಟ್ಟಾಗಿ ಪಾಲಿಸಲು ಜನತೆಗೆ ಅಲ್ಲಿನ ಸರಕಾರ ಸೂಚಿಸಿದೆ. ಈಗಿರುವಾಗ ವ್ಯಕ್ತಿಯೊಬ್ಬ ಅದನ್ನು ಮರೆತು ಮಾಸ್ಕ್ ತೆಗೆದಿದ್ದಾನೆ. ಅದರ ಪರಿಣಾಮವಾಗಿ 2 ಲಕ್ಷ ದಂಡ ತೆತ್ತಿದ್ದಾನೆ. ಆತ ಸಾರ್ವಜನಿಕ ಸ್ಥಳದಲ್ಲಿ ತುಂಬಾ ಸಮಯವೇನೂ ಮಾಸ್ಕ್ ತೆಗೆದಿಲ್ಲ. ಕೇವಲ 16 ಸೆಕೆಂಡ್ ಗಳಲ್ಲಿ ಮಾಸ್ಕ್ ತೆಗೆದು ಮತ್ತೆ ಹಾಕಿಕೊಂಡಿದ್ದಾನೆ.

ಈತನ ಹೆಸರು ಕ್ರಿಸ್ಟೋಫರ್ ಓಟೋಲಾ. ಯುಕೆಯ ಲಿವರ್ ಪೂಲ್ ಪ್ರದೇಶದಲ್ಲಿ ವಾಸಿಸುವ ಈತ ಮಾಸ್ಕ್ ಧರಿಸಿ ಶಾಪಿಂಗ್ ಮಾಲ್ ಗೆ ಹೋಗಿದ್ದಾನೆ. ಉಸಿರಾಡಲು ಕಷ್ಟ ಆಯಿತು ಎಂದು ಆತ ಮಾಸ್ಕ್ ತೆಗೆದು ಮತ್ತೆ ಹಾಕಿಕೊಂಡಿದ್ದಾನೆ. ಈ ಘಟನೆಯ ಸಂದರ್ಭದಲ್ಲಿ ಪೊಲೀಸರು ಮಾಲ್ ನಲ್ಲಿದ್ದು, ತಕ್ಷಣ ಆತನನ್ನು ಹಿಡಿದು ಮಾಸ್ಕ್ ಹಾಕಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ. ಆತ ಎಷ್ಟೇ ವಿವರಣೆ ನೀಡಿದರೂ ಕೇಳದೆ, ಆತನ ಫೋನ್ ನಂಬರ್ ಜೊತೆಗೆ ಎಲ್ಲಾ ವಿವರಗಳನ್ನು ತೆಗೆದುಕೊಂಡಿದ್ದಾರೆ ಪೊಲೀಸರು.

ಅನಂತರ ಆತನ ಅಡ್ರೆಸ್ ಗೆ ನೂರು ಪೌಂಡ್ ದಂಡ ಕಟ್ಟುವಂತೆ ನೋಟಿಸ್ ಕಳುಹಿಸಲಾಗಿದೆ‌. ಈ ದಂಡವನ್ನು ಪ್ರಶ್ನಿಸಿ ಈತ ವಾಪಸ್ ಇಮೇಲ್ ಮಾಡಿದ್ದಾನೆ‌. ವಾದ ಮಾಡಿದಕ್ಕಾಗಿ ದಂಡವನ್ನು ಈಗ 2000 ಪೌಂಡ್ ಗೆ ಏರಿಸಲಾಗಿದೆ. ಅಂದರೆ ನಮ್ಮ ರೂಪಾಯಿಯಲ್ಲಿ 2 ಲಕ್ಷ ರೂಪಾಯಿ. ಅಂದರೆ ಕ್ರಿಸ್ಟೋಫರ್ ದಂಡವನ್ನು ಪಾವತಿಸದಿದ್ದಕ್ಕಾಗಿ ಅವರಿಗೆ ಇಮೇಲ್ ಮಾಡಿದ್ದಕ್ಕಾಗಿ ಮತ್ತೊಮ್ಮೆ ದಂಡ ವಿಧಿಸಲಾಗಿದೆ.

ಆದರೆ ಕ್ರಿಸ್ಟೋಫರ್ ತನ್ನ ಸಂಬಳದಲ್ಲಿ ಅಷ್ಟೊಂದು ಹಣವನ್ನು ಕಟ್ಟಲಾಗದೆ ಕಣ್ಣೀರಿಟ್ಟಿದ್ದಾರೆ. ಕೆಲವು ಸೆಕೆಂಡ್ ಗಳ ಕಾಲ ಮಾಸ್ಕ್ ಕಳಚಿದಕ್ಕೆ ತನಗೆ ಇಷ್ಟು ಕಠಿಣ ಶಿಕ್ಷೆ ಬೇಕಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಪ್ರಕರಣ ಈಗ ನ್ಯಾಯಾಲಯದ ಮೆಟ್ಟಿಲೇರಿದೆ.