Home Interesting ಉಳ್ಳಾಲ: ಗುಳಿಗಜ್ಜನ ಕಟ್ಟೆ ಮುಂದೆ ಚಪ್ಪಲಿ ಧರಿಸಿ, ತ್ರಿಶೂಲ ಹಿಡಿದ ಫೋಟೋವನ್ನು ಸ್ಟೇಟಸ್ ಹಾಕಿ ವಿಕೃತಿ...

ಉಳ್ಳಾಲ: ಗುಳಿಗಜ್ಜನ ಕಟ್ಟೆ ಮುಂದೆ ಚಪ್ಪಲಿ ಧರಿಸಿ, ತ್ರಿಶೂಲ ಹಿಡಿದ ಫೋಟೋವನ್ನು ಸ್ಟೇಟಸ್ ಹಾಕಿ ವಿಕೃತಿ ಮೆರೆದ ಮುಸ್ಲಿಂ ವ್ಯಕ್ತಿ| ಒಂದು ತಿಂಗಳ ನಂತರ ಆರೋಪಿ ಪೊಲೀಸರ ವಶಕ್ಕೆ

Hindu neighbor gifts plot of land

Hindu neighbour gifts land to Muslim journalist

ಉಳ್ಳಾಲ :ಕೊಣಾಜೆಯಲ್ಲಿ ಗುಳಿಗಜ್ಜನ ಕಟ್ಟೆ ಮುಂದೆ ಚಪ್ಪಲಿ ಧರಿಸಿ ತ್ರಿಶೂಲ ಹಿಡಿದು ನಿಂತ ಸ್ಟೇಟಸ್ ಹಾಕಿ ವಿಕೃತಿ ಮೆರೆದ ಘಟನೆ ನಡೆದಿದ್ದು, ಆತನನ್ನು ಕೊಣಾಜೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಅಸೈಗೋಳಿಯ ಸಲೂನ್ ಒಂದರಲ್ಲಿ ಕ್ಷೌರಿಕನಾಗಿರುವ ಉತ್ತರ ಭಾರತ ಮೂಲದ ಆದಿಲ್ ಆಯಾನ್ ಖಾನ್ ಎಂಬಾತನೇ ವಿಕೃತಿ ಮೆರೆದ ಆರೋಪಿ.

ಆಯಾನ್ ಖಾನ್ ಮುಡಿಪು ಬಳಿಯ ಕಂಬಳ ಪದವು ಎಂಬಲ್ಲಿನ ಗುಳಿಗಜ್ಜನ ಕಟ್ಟೆಯ ಎದುರು ನಿಂತು ಚಪ್ಪಲಿ
ಧರಿಸಿ ದೈವದ ತ್ರಿಶೂಲ ಹಿಡಿದು ನಿಂತು ಫೋಟೊ
ತೆಗೆಸಿಕೊಂಡಿದ್ದು ತನ್ನ ಮೊಬೈಲ್ಲಿ ಸ್ಟೇಟಸ್ ಹಾಕಿದ್ದನೆನ್ನಲಾಗಿದೆ.ಆರೋಪಿ ತನ್ನ ಕುಕೃತ್ಯವನ್ನ ಒಂದು ತಿಂಗಳ ಹಿಂದೆ ಎಸಗಿದ್ದು,ಇದೀಗ ಆತ ದೈವಕ್ಕೆ ಅಪಚಾರವೆಸಗಿದ ಸ್ಟೇಟಸ್ ಫೋಟೊ ವೈರಲ್ ಆಗಿದೆ.ಕೊಣಾಜೆ ಪೊಲೀಸರು ಆರೋಪಿ ಆಯಾನ್ ಖಾನ್ ನನ್ನು ವಶಕ್ಕೆ ತೆಗೆದು ವಿಚಾರಣೆ ನಡೆಸುತ್ತಿದ್ದಾರೆ.

ಈ ನಡುವೆ ಕೆಲವು ಸ್ಥಳೀಯ ಯುವಕರು ತಾವು ಹಿಂದು
ಸಂಘಟನೆಯವರೆಂದು ಹೇಳಿ ದೈವ ನಿಂದನೆಯ ಸ್ಟೇಟಸ್ ಮುಂದಿಟ್ಟು ಕ್ಷೌರಿಕ ಆಯಾನ್ ನನ್ನ ಹಣಕ್ಕಾಗಿ ಬ್ಲಾಕ್ ಮೇಲ್ ಮಾಡಿದ್ದಾರೆ ಎನ್ನುವ ಮಾಹಿತಿಗಳಿದ್ದು,ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.