Home Interesting ಕುಕ್ಕೇ ಸುಬ್ರಹ್ಮಣ್ಯ: ಅತೀ ಕಡಿಮೆ ಸಮಯದಲ್ಲಿ 136 ಅಕ್ಕಿ ಕಾಳುಗಳನ್ನು ಜೋಡಿಸಿ ನಾಡಗೀತೆ ಬರೆದ ಯುವಕ!!...

ಕುಕ್ಕೇ ಸುಬ್ರಹ್ಮಣ್ಯ: ಅತೀ ಕಡಿಮೆ ಸಮಯದಲ್ಲಿ 136 ಅಕ್ಕಿ ಕಾಳುಗಳನ್ನು ಜೋಡಿಸಿ ನಾಡಗೀತೆ ಬರೆದ ಯುವಕ!! ಸಾಧನೆಗೆ ಪ್ರಶಸ್ತಿಯ ಗರಿ – ಗಿನ್ನೆಸ್ ದಾಖಲೆಯೇ ಮುಂದಿನ ಗುರಿ

Hindu neighbor gifts plot of land

Hindu neighbour gifts land to Muslim journalist

ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದೆಂಬ ಮಾತಿನಂತೆ ಅಕ್ಕಿ ಕಾಳಿನ ಗಾತ್ರ ಹಾಗೂ ಅದರಲ್ಲಿರುವ ಉಪಯೋಗಕರ ಅಂಶಗಳಿಗೆ ನಮ್ಮ ಇಂದಿನ ಆರೋಗ್ಯ ಹಾಗೂ ಹಸಿವು ನೀಗಿಸಿದ ಅನ್ನವೇ ಉದಾಹರಣೆ.ಇದರಲ್ಲಿ ಬೇರೆ ಮಾತಿಲ್ಲ,ಇಂತಹ ಅಕ್ಕಿ ಕಾಳುಗಳನ್ನು ಒಂದೊಂದಾಗಿ ಹೆಕ್ಕಿ ರಾಶಿ ಮಾಡುವುದು ಒಂದು ಸಾಹಸವೇ ಸರಿ,ಅಂತಹ ಸಾಹಸಕ್ಕೆ ಇಲ್ಲೊಬ್ಬ ಯುವಕ ಕೈಹಾಕಿದ್ದು ಸುಮಾರು 80 ನಿಮಿಷಗಳಲ್ಲಿ 136 ಅಕ್ಕಿ ಕಾಳುಗಳನ್ನು ಜೋಡಿಸಿ ನಮ್ಮ ನಾಡ ಗೀತೆಯನ್ನೇ ಬರೆದಿದ್ದಾರೆ.

ಅಚ್ಚರಿಯಾದರೂ ಈ ಸ್ಟೋರಿ ಸತ್ಯ. ಹೌದು,ಇಂತಹದೊಂದು ಸಾಧನೆ ಬೆಳಕಿಗೆ ಬಂದಿದ್ದು ಕಡಬ ತಾಲೂಕಿನ ಕುಕ್ಕೇ ಸುಬ್ರಹ್ಮಣ್ಯ ದಿಂದ.ಮೂಲತಃ ಹಾವೇರಿಯವರಾಗಿದ್ದು,ಪ್ರಸ್ತುತ ಕುಕ್ಕೆಯಲ್ಲಿ ಉದ್ಯಮಿಯಾಗಿರುವ ಮೈಕ್ರೋ ಪರಮೇಶ್ ಅವರೇ ಈ ಸಾಧಕ.ಇವರ ಸಾಧನೆಯನ್ನು ಕಂಡು ವಂಡರ್ ರೆಕಾರ್ಡ್ ಹಾಗೂ ಇಂಡಿಯ ಬುಕ್ ಆಫ್ ರೆಕಾರ್ಡ್ ನವರು ಕೂಡಾ ಅಚ್ಚರಿಗೊಂಡಿದ್ದು,ಪರಮೇಶ್ ರನ್ನು ಸಂಪರ್ಕಿಸಿ ಪ್ರದರ್ಶನಕ್ಕೆ ಅನುಮತಿ ನೀಡಿದ್ದಾರೆ.

ಅದಲ್ಲದೇ ಅಕ್ಕಿ ಕಾಳಿನಲ್ಲಿ ಬರೆದ ನಾಡಗೀತೆಯನ್ನು ಪ್ರೇಮ್ ಹಾಕಿ ರಾಜ್ಯದ ಮುಖ್ಯಮಂತ್ರಿ ಬೊಮ್ಮಾಯಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕುಮಾರ್ ರಿಗೆ ಕಾಣಿಕೆಯಾಗಿ ನೀಡಿದ್ದಾರೆ.ಮುಂದೆ ಕುಕ್ಕೆಯ ಇತಿಹಾಸವನ್ನು ಚರಿತ್ರೆಯನ್ನು ಕೂಡಾ ಅಕ್ಕಿ ಕಾಳಿನಲ್ಲಿ ಬರೆಯಲಿದ್ದು,ದೇಶ ಕಂಡ ಓರ್ವ ಉತ್ತಮ ಪ್ರಧಾನಿ ನರೇಂದ್ರ ಮೋದಿಯವರ ಸಾಧನೆ ಹಾಗೂ ಜೀವನ ಚರಿತ್ರೆಯನ್ನು ಹತ್ತು ಸಾವಿರ ಕಾಳಿನಲ್ಲಿ ಅತೀ ಕಡಿಮೆ ಸಮಯದಲ್ಲಿ ಬರೆದು ಗಿನ್ನೆಸ್ ದಾಖಲೆಯ ಗುರಿ ಹೊಂದಿದ್ದಾರೆ.