ವಾಹನ ಸವಾರರಿಗೆ ಖುಷಿ ಸಮಾಚಾರ|ಡಿಎಲ್ ಮತ್ತು ಎಲ್.ಎಲ್. ನವೀಕರಣ ಇನ್ನು ಮುಂದೆ ಆನ್ಲೈನ್

Share the Article

ಬೆಂಗಳೂರು:ವಾಹನ ಕಲಿಕಾ ಪರವಾನಿಗೆ, ಚಾಲನಾ ಪರವಾನಿಗೆ ನವೀಕರಣಕ್ಕಾಗಿ ಅಲೆದಾಡಿ ಸುಸ್ತಾದ ರಾಜ್ಯದ ವಾಹನ ಸವಾರರಿಗೆ ಸಾರಿಗೆ ಇಲಾಖೆಯಿಂದ ಖುಷಿ ಸಮಾಚಾರ ಸಿಕ್ಕಿದ್ದು, ಇನ್ನು ಮುಂದೆ RTO ಕಚೇರಿಗೆ ಅಲೆದಾಡಬೇಕಿಲ್ಲ.ಬದಲಿಗೆ ಡಿಜಿಟಲ್ ಮಯ.

ಹೌದು.ಸಾರಿಗೆ ಇಲಾಖೆ ಆನ್ಲೈನ್ ನಲ್ಲಿ ಡಿಎಲ್ ಮತ್ತು ಎಲ್.ಎಲ್. ನವೀಕರಣಕ್ಕೆ ಅವಕಾಶ ಕಲ್ಪಿಸಲಾಗಿದೆ.ಇದರೊಂದಿಗೆ ಆನ್ಲೈನ್ ನಲ್ಲಿ ಹಲವು ಸೇವೆಗಳು ಲಭ್ಯವಿದ್ದು,ವಿಳಾಸ, ಹೆಸರು ತಿದ್ದುಪಡಿಗೂ ಅವಕಾಶ ನೀಡಲಾಗಿದೆ.

ವಿಳಂಬ, ಅಕ್ರಮಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಸಾರಿಗೆ ಇಲಾಖೆಯಿಂದ ಅನೇಕ ಕ್ರಮಕೈಗೊಳ್ಳಲಾಗಿದ್ದು, ಮನೆಯಲ್ಲೇ ಕುಳಿತು ಕೆಲವು ಸೇವೆ ಪಡೆಯಬಹುದಾಗಿದೆ ಎಂದು ಹೇಳಲಾಗಿದೆ.http://sarathi.parivahan.gov.in/sarathiservice ವೆಬ್ಸೈಟ್ ನಲ್ಲಿ ಈ ಸೇವೆಗಳು ಲಭ್ಯವಿದೆ.

Leave A Reply