ಕಡಬ : ಅನಾರೋಗ್ಯದಿಂದ ಬಿ.ಕಾಂ.ವಿದ್ಯಾರ್ಥಿ ಸಾವು

ಕಡಬ : ಕಳೆದ ನಾಲ್ಕು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಇಚ್ಲಂಪಾಡಿ ಗ್ರಾಮದ ಲಾವತ್ತಡ್ಕ ರುದ್ರಮಜಲು ನಿವಾಸಿ ನಂದಕುಮಾರ್(19ವ.)ರವರು ಜ.27ರಂದು ಸಂಜೆ ನಿಧನರಾಗಿದ್ದಾರೆ.

 

ನೆಲ್ಯಾಡಿಯ ಕಾಲೇಜೊಂದರಲ್ಲಿ ಪ್ರಥಮ ಬಿ.ಕಾಂ.ವಿದ್ಯಾಥಿಯಾಗಿದ್ದ ನಂದಕುಮಾರ್ ನಾಲ್ಕು ವರ್ಷಗಳಿಂದ ಅನಾರೋಗ್ಯಕ್ಕೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದರು.

ದಿಢೀರ್ ತೀವ್ರ ಅನಾರೋಗ್ಯಕ್ಕೆ ತುತ್ತಾದ ನಂದಕುಮಾರ್ ರವರನ್ನು ಜ 26ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಗೆ ಸ್ಪಂದಿಸದ ಅವರು ಜ.27ರಂದು ಸಂಜೆ ನಿಧನರಾಗಿದ್ದಾರೆ.

ಮೃತ ಬಾಲಕ ತಂದೆ ಸುರೇಂದ್ರ ಕುಮಾರ್, ತಾಯಿ ಬಿಂದು, ಸಹೋದರ ನಿಖಿಲ್ ಕುಮಾರ್ ರವರನ್ನು ಅಗಲಿದ್ದಾರೆ.

Leave A Reply

Your email address will not be published.