ವಿರಾಟ್‌ನನ್ನು ಬೀಳ್ಕೊಟ್ಟ ಪ್ರಧಾನಿ, ರಾಷ್ಟ್ರಪತಿ

ರಾಷ್ಟ್ರಪತಿ ಅವರ ಅಂಗರಕ್ಷಕ ತಂಡದಲ್ಲಿದ್ದ ವಿರಾಟ್‌ಗೆ ಇದೇ ಕೊನೆಯ ಗಣರಾಜ್ಯೋತ್ಸವವಾಗಿದ್ದು, ನಿವೃತ್ತಿ ಹೊಂದಿದೆ. ಈ ಕುದುರೆಯನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಬೀಳ್ಕೊಟ್ಟಿದ್ದಾರೆ.

 

73ನೇ ಗಣರಾಜ್ಯೋತ್ಸವ ಪರೇಡ್ ಮುಕ್ತಾಯವಾದ ಬಳಿಕ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಅಂಗರಕ್ಷಕರು ಅವರನ್ನು ಮತ್ತೆ ರಾಷ್ಟ್ರಪತಿ ಭವನಕ್ಕೆ ಕರೆದೊಯ್ದರು. ಆದರೆ, ಎಲ್ಲರ ಗಮನ ಸೆಳೆದಿದ್ದು ಅಂಗರಕ್ಷಕ ತಂಡದಲ್ಲಿದ್ದ ವಿರಾಟ್.

ಗಣರಾಜ್ಯೋತ್ಸವ ಪರೇಡ್‌ಗಳಲ್ಲಿ ಈ ಕುದುರೆ 13 ಬಾರಿ ಭಾಗವಹಿಸಿದೆ.

ಜನವರಿ 15 ರಂದು ಸೇನಾ ದಿನದ ಹಿಂದಿನ ದಿನದಂದು ವಿರಾಟ್‌ಗೆ ಸೇನಾ ಮುಖ್ಯಸ್ಥರಿಂದ ಶ್ಲಾಘನೆ ದೊರೆತಿತ್ತು.

ವಿರಾಟ್ ಅಸಾಧಾರಣ ಸೇವೆ ಮತ್ತು ಸಾಮರ್ಥ್ಯಗಳಿಗಾಗಿ ಪ್ರಶಂಸೆಯನ್ನು ಪಡೆದ ಮೊದಲ ಕುದುರೆಯಾಗಿದೆ. ಹ್ಯಾನೋವೇರಿಯನ್ ತಳಿಯ ಈ ಕುದುರೆಯನ್ನು 2003ರಲ್ಲಿ ಅಂಗರಕ್ಷಕ ತಂಡಕ್ಕೆ ಸೇರಿಸಲಾಯಿತು. ಇದನ್ನು ರಾಷ್ಟ್ರಪತಿಗಳ ಅಂಗರಕ್ಷಕನ ಚಾರ್ಜರ್’ ಎಂದೂ ಕರೆಯುತ್ತಾರೆ.

Leave A Reply

Your email address will not be published.