ಕೇಸರಿ ಪೇಟ ತೊಡಿಸಲು ಬಂದ ಅಭಿಮಾನಿಯನ್ನು ಗದರಿಸಿ, ಪೇಟ ಎಸೆದ ಮಾಜಿ ಸಿಎಂ ಸಿದ್ದರಾಮಯ್ಯ

ಸಿದ್ದರಾಮಯ್ಯ ಅವರಿಗೆ ಕೇಸರಿ ಪೇಟ ತೊಡಿಸಲು ಬಂದ ಅಭಿಮಾನಿಯನ್ನು ಗದರಿಸಿ,ಪೇಟ ಬಿಸಾಕಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

 

ಬಾಗಲಕೋಟೆ ಭೇಟಿ ವೇಳೆಯಲ್ಲಿ ಬಾದಾಮಿ ತಾಲೂಕಿನ ಕಾತರಕಿ ಗ್ರಾಮಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗ್ರಾಮ ಪಂಚಾಯತ್ ‌ನ ಕಟ್ಟಡ ಉದ್ಘಾಟನೆಗೆ ತೆರಳಿದ್ದರು.

ಆ ವೇಳೆ ಅಭಿಮಾನಿಯೋರ್ವ ಕೇಸರಿ ಪೇಟ ತೊಡಿಸಲು ಬಂದಿದ್ದಾನೆ. ಸಿದ್ದರಾಮಯ್ಯನವರು ಬೇಡ ಎಂದು ನಿರಾಕರಿಸಿದ್ದಾರೆ.

ಆದರೆ ಅಭಿಮಾನಿ ರುಮಾಲು ತಂದು ತಲೆಗೆ ಇಟ್ಟಿದ್ದಾನೆ. ಇದರಿಂದ ಸಿಟ್ಟುಗೊಂಡ ಸಿದ್ದರಾಮಯ್ಯನವರು ಅದನ್ನು ಕಿತ್ತೆಸೆದು ಅಭಿಮಾನಿ ವಿರುದ್ಧ ಗರಂ ಆಗಿದ್ದಾರೆ. ಈ ಕುರಿತ ವಿಡಿಯೋ ವೈರಲ್ ಆಗಿದೆ.

Leave A Reply

Your email address will not be published.