ಕಡಬ: ಒಂದೇ ದಿನ ಐದು ಕಡೆ ನಡೆದ ಗ್ರಾಮ ಸಭೆ!|ಇಲಾಖಾಧಿಕಾರಿಗಳ ಭಾಗವಹಿಸುವಿಕೆಗೆ ಅಡ್ಡಿ

ಕಡಬ : ಕಡಬ ತಾಲೂಕು ವ್ಯಾಪ್ತಿಯಲ್ಲಿ ಮಂಗಳವಾರ ಒಂದೇ ದಿನ ಐದು ಕಡೆ ಗ್ರಾಮ ಸಭೆ ನಡೆದಿದ್ದು ಇಲಾಖಾಧಿಕಾರಿಗಳು ಬಹುತೇಕ ಕಡೆ ಭಾಗವಹಿಸಲು ಅಡ್ಡಿಯಾದ ಬಗ್ಗೆ ವರದಿಯಾಗಿದೆ.
ಕಡಬ ತಾಲೂಕಿನ ಪೆರಾಬೆ, ಮರ್ದಾಳ, ಬಿಳಿನೆಲೆ, ಎಡಮಂಗಲ ಹಾಗೂ ಸುಬ್ರಹ್ಮಣ್ಯ ಗ್ರಾ.ಪಂ.ಗಳಲ್ಲಿ ಜ.೨೫ರಂದು ಒಂದೇ ದಿನ ಗ್ರಾಮಸಭೆ ನಡೆದಿದೆ. ಕೆಲವೆಡೆ ಇಲಾಖಾಧಿಕಾರಿಗಳು ಗೈರಾಗಿದ್ದು, ಒಂದೇ ದಿನ ಹಲವೆಡೆ ಗ್ರಾಮಸಭೆ ನಡೆಸಿರುವುದೇ ಇದಕ್ಕೆ ಕಾರಣ ಎಂಬ ಆರೋಪ ಕೇಳಿ ಬಂದಿದೆ. ಕೆಲವೆಡೆ ಅಧಿಕಾರಿಗಳು ಒಂದು ಕಡೆ ತಮ್ಮ ಮಾಹಿತಿ, ಪ್ರಶ್ನೋತ್ತರ ಮುಗಿಸಿ ಬೇರೆಡೆಯ ಗ್ರಾಮ ಸಭೆಗಳಲ್ಲಿ ಭಾಗವಹಿಸಿದ ಘಟನೆಯೂ ನಡೆದಿದೆ. ಆದರೂ ಕೆಲವೆಡೆ ಇಲಾಖೆಯ ಅಧಿಕಾರಿಗಳು ಅನಿವಾರ್ಯವಾಗಿ ಗೈರಾಗಬೇಕಾಗಿದೆ. ಕಡಬ ತಾ.ಪಂ. ವತಿಯಿಂದ ಗ್ರಾಮಸಭೆ ನಡೆಸಲು ಮೊದಲೇ ವೇಳಾಪಟ್ಟಿ ತಯಾರಿಸಿದ್ದರೂ, ಗ್ರಾ.ಪಂ. ನವರು ತಾವೇ ದಿನಾಂಕ ಬದಲಾಯಿಸಿಕೊಂಡು ದಿನ ನಿಗಧಿ ಪಡಿಸಿ ಗ್ರಾಮಸಭೆ ನಡೆಸಿದ್ದಾರೆ ಎನ್ನಲಾಗಿದೆ. ನಾವು ನೀಡಿದ ವೇಳಾಪಟ್ಟಿ ಬದಲಾಯಿಸಿ ಗ್ರಾಮಸಭೆ ನಡೆಸುವುದಾದಲ್ಲಿ ನಮಗೆ ಮಾಹಿತಿ ನೀಡಿಯೇ ದಿನ ನಿಗಧಿ ಪಡಿಸಬೇಕೆಂಬ ಮಾಹಿತಿ ನೀಡಿದ್ದರೂ ನಮಗೆ ಮಾಹಿತಿ ನೀಡಿಲ್ಲ ಈ ಬಗ್ಗೆ ಸಂಬAಧಿಸಿದ ಗ್ರಾ.ಪಂ. ಅವರಲ್ಲಿ ಮಾಹಿತಿ ಕೇಳಲಾಗುವುದು ಎಂದು ಕಡಬ ತಾ.ಪಂ. ಇಒ ನವೀನ್ ಕುಮಾರ್ ಭಂಡಾರಿ ಅವರು ಪ್ರತಿಕ್ರಿಯಿಸಿದ್ದಾರೆ.

Leave A Reply

Your email address will not be published.