ಕಡಬ: ಮದ್ಯದ ಅಮಲಿನಲ್ಲಿ ನಡು ರಸ್ತೆಯಲ್ಲಿ ಮಲಗಿದ ಯುವಕ: ಕೆಲ ಹೊತ್ತು ವಾಹನ ಸಂಚಾರಕ್ಕೆ ಅಡ್ಡಿ

Share the Article

ಕಡಬ: ಅಮಲು ಪದಾರ್ಥ ಸೇವಿಸಿ ಯುವಕನೊಬ್ಬ ನಡು ರಸ್ತೆಯಲ್ಲಿ ಕೆಲ ಹೊತ್ತು ಮಲಗಿದ್ದು ಕೆಲ ಹೊತ್ತು ವಾಹನ ಸಂಚಾರಕ್ಕೆ ಅಡ್ಡಿ ಉಂಟಾದ ಘಟನೆ ಇಂದು ಕಡಬ ಪೇಟೆಯಲ್ಲಿ ನಡೆದಿದೆ.
ಮುಖ್ಯ ಬಸ್ ನಿಲ್ದಾಣದ ಮುಂಭಾಗದ ರಸ್ತೆಯಲ್ಲೇ ಮಲಗಿದ ಕಾರಣ ಸಾರ್ವಜನಿಕರು ,ವಾಹನ ಸವಾರರು ಗುಂಪು ಸೇರಿದ್ದರು.
ಬಳಿಕ ಆಟೋಚಾಲಕರು ಆತನ ಮುಖಕ್ಕೆ ನೀರು ಹಾಕಿ ಎಬ್ಬಿಸಿ ಬೇರೆ ಕಡೆಗೆ ಶಿಪ್ಟ್ ಮಾಡಿದ್ದಾರೆ ಎನ್ನಲಾಗಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಕಡಬ ಪೊಲೀಸರು ಆಗಮಿಸಿದ್ದರು. ಕೆಲ ಹೊತ್ತು ವಾಹನ ಸಂಚಾರಕ್ಕೆ ಅಡ್ದಿ ಉಂಟಾಗಿತ್ತು.

Leave A Reply