ಕಾಸರಗೋಡು: ಆನ್ಲೈನ್ ತರಗತಿವೇಳೆ ನಡೆಯಿತು ಮುಜುಗರ ತರಿಸುವ ಘಟನೆ!! ಕದ್ದು ಜಾಯಿನ್ ಆದ ಅನಾಮಧೇಯ ವ್ಯಕ್ತಿಯಿಂದ ಪ್ರದರ್ಶನವಾಯಿತು ಅಶ್ಲೀಲ ದೃಶ್ಯ
ಕಾಸರಗೋಡು: ಆನ್ಲೈನ್ ತರಗತಿ ನಡೆಯುತ್ತಿದ್ದ ಸಂದರ್ಭದಲ್ಲಿ ಅಶ್ಲೀಲ ದೃಶ್ಯವೊಂದು ಕಾಣಿಸಿಕೊಂಡ ಘಟನೆ ಕಾಸರಗೋಡಿನ ಕಾಞಂಗಾಡ್ ನಿಂದ ವರದಿಯಾಗಿದ್ದು,ಈ ಬಗ್ಗೆ ಸೈಬರ್ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿದೆ.
ಏನಿದು ಘಟನೆ: ಎಂದಿನಂತೆ ಶಿಕ್ಷಕರು ಗೂಗಲ್ ಮೀಟ್ ನಲ್ಲಿ ಮಕ್ಕಳಿಗಾಗಿ ಆನ್ಲೈನ್ ತರಗತಿ ಪ್ರಾರಂಭಿಸಿದ್ದರು. ಈ ಸಂದರ್ಭದಲ್ಲಿ ಜಾಯಿನ್ ಆದ ವ್ಯಕ್ತಿಯೋರ್ವ ಅಶ್ಲೀಲ ದೃಶ್ಯವನ್ನು ಪ್ರದರ್ಶನ ಮಾಡಿದ್ದು,ಹಲವು ಮಕ್ಕಳು ದೃಶ್ಯವನ್ನು ಕಂಡಿರಬಹುದು ಎನ್ನಲಾಗಿದೆ.
ವಿದ್ಯಾರ್ಥಿಯ ಲಿಂಕ್ ಬಳಸಿ ಯಾರೋ ಈ ರೀತಿ ಜಾಯಿನ್ ಆಗಿದ್ದಲ್ಲದೆ, ಅಶ್ಲೀಲ ದೃಶ್ಯವನ್ನು ತೋರಿಸಿದ್ದಾರೆ. ಸದ್ಯ ವಿದ್ಯಾರ್ಥಿಗಳ ಸಹಿತ ಶಿಕ್ಷಕರು ಮುಜುಗರಕ್ಕೊಳಗಾಗಿದ್ದು, ಈ ಬಗ್ಗೆ ಶಾಲಾ ಆಡಳಿತ ಮಂಡಳಿ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದೆ.
ಆನ್ಲೈನ್ ತರಗತಿಗಳಲ್ಲಿ ಇಂತಹ ಘಟನೆ ಮರುಕಳಿಸದಂತೆ ಸಂಬಂಧಪಟ್ಟವರು ಎಚ್ಚರ ವಹಿಸುವುದು ಅಗತ್ಯವಾಗಿದೆ.