Home Education ಶ್ರೀ ರಾಮಕುಂಜೇಶ್ವರ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿ ಸಂಘದ ಉದ್ಘಾಟನೆ:

ಶ್ರೀ ರಾಮಕುಂಜೇಶ್ವರ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿ ಸಂಘದ ಉದ್ಘಾಟನೆ:

Hindu neighbor gifts plot of land

Hindu neighbour gifts land to Muslim journalist

ಯಾವುದೇ ಗುರಿಯನ್ನು ಸಾಧಿಸಲು ನಾವು ಸಂಘಟಿತರಾಗಬೇಕು.”ಸ್ವಂತಕ್ಕೆ ಸ್ವಲ್ಪ ಸಮಾಜಕ್ಕೆ ಸರ್ವಸ್ವ”ಈ ರೀತಿಯ ತತ್ವ ದ ಮುಖೇನ ನಾಯಕನಾದವ ಕಾರ್ಯನಿರ್ವಹಿಸಬೇಕು ಎಂದು ಶ್ರೀ ವೆಂಕಟರಮಣ ರಾವ್ ಮಂಕುಡೆ ಸಂಚಾಲಕರು ಸರಸ್ವತಿ ವಿದ್ಯಾಲಯ ಕಡಬ ಅವರು ತಿಳಿಸಿದರು. ಇವರು ಶ್ರೀ ರಾಮಕುಂಜೇಶ್ವರ ಮಹಾವಿದ್ಯಾಲಯದಲ್ಲಿ ನಡೆದ ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭದಲ್ಲಿ ದೀಪ ಬೆಳಗಿಸಿ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು.
ಕಾರ್ಯಕ್ರಮದ ಅಭ್ಯಾಗತರಾಗಿದ್ದ ಶ್ರೀ ವಿಶ್ವನಾಥ ಶೆಟ್ಟಿ ಉಪನ್ಯಾಸಕರು ಸೈಂಟ್ ಜಾರ್ಜ್ ಪದವಿಪೂರ್ವ ಕಾಲೇಜು ನೆಲ್ಯಾಡಿ ಅವರು ಮಾತನಾಡಿ ನಾಯಕನಾದವನಿಗೆ ತ್ಯಾಗಮಾಡುವ, ಜವಾಬ್ದಾರಿ ತೆಗೆದುಕೊಳ್ಳುವ, ಮಾನವೀಯ ಮನೋಭಾವವಿರಬೇಕು. ಈ ರೀತಿಯ ಗುಣ ವಿದ್ದವನು ಮಾತ್ರ ಯಶಸ್ವಿ ನಾಯಕನಾಗಲು ಸಾಧ್ಯ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ದ್ವಾರಕ ಪ್ರತಿಷ್ಠಾನ ದ ಗೌರವ ಅಧ್ಯಕ್ಷರಾದ ಶ್ರೀ ಹರಿಕೃಷ್ಣ ಭಟ್ ಅವರು ಗುರುವೆಂದರೆ ಶ್ರೇಷ್ಠತ್ವ ಇಂತಹ ಗುರುಗಳನ್ನು ನಾವು ಗೌರವಿಸಬೇಕು ಎಂದು ತಿಳಿಸಿದರು.
ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾದ ಸದಸ್ಯರಾದ ಶ್ರೀ ಕೆ ಲಕ್ಷ್ಮೀನಾರಾಯಣ ರಾವ್ ಅವರು ನಾಯಕತ್ವದಲ್ಲಿ ಮುಂದಾಳತ್ವ ವಿರಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾದ ಕಾರ್ಯದರ್ಶಿಗಳಾದ ಶ್ರೀ ರಾಧಾಕೃಷ್ಣ ಕೆ ಎಸ್ ವಹಿಸಿದ್ದರು.
ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಗಣರಾಜ ಕುಂಬ್ಳೆ ಅಈವರು ಕಾರ್ಯಕ್ರಮದ ಕುರಿತಂತೆ ಪ್ರಾಸ್ತಾವಿಕ ಮಾತನಾಡಿದರು.
ವೇದಿಕೆಯಲ್ಲಿ ಕಾಲೇಜಿನ ರಾಜ್ಯಶಾಸ್ತ್ರ ಉಪನ್ಯಾಸಕ ಇ ಎಲ್ ಸಿ ನೋಡಲ್ ಅಧಿಕಾರಿ ಶ್ರೀ ಲತನ್ ಜಿ ಎಸ್ ವಿದ್ಯಾರ್ಥಿ ಸಂಘದ ನಾಯಕ ಭರತ್, ಕಾರ್ಯದರ್ಶಿ ಶೃತನ್ ಜೊತೆ ಕಾರ್ಯದರ್ಶಿ ಸ್ವಪ್ನ ಉಪಸ್ಥಿತರಿದ್ದರು.
ಕಾಲೇಜಿನ ಉಪನ್ಯಾಸಕ ವೃಂದದವರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿ ಸಂಘದ ನಾಯಕ ಭರತ್ ಸ್ವಾಗತಿಸಿ, ಯೋಗೀಶ್ ತೃತೀಯ ಬಿಕಾಂ ವಂದಿಸಿದರು. ಕುಮಾರಿ ಸುಷ್ಮಾ ಕಾರ್ಯಕ್ರಮ ನಿರೂಪಿಸಿದರು.