??BIG BREAKING NEWS…!!|ಮೂಡಬಿದಿರೆ : ಯಕ್ಷಗಾನ ಕಲಾವಿದ, ಹಿರಿಯಡ್ಕ ಮೇಳದ ವೇಣೂರು ವಾಮನ ಕುಮಾರ್ ಅಪಘಾತಕ್ಕೆ ಬಲಿ

Share the Article

ಕೋವಿಡ್ ಕಾಲದಲ್ಲಿ ಈಗಾಗಲೇ ಸಂಕಷ್ಟಕ್ಕೆ ತುತ್ತಾಗಿರುವ ಯಕ್ಷಗಾನ ರಂಗಕ್ಕೆ ಮತ್ತೊಂದು ಆಘಾತ. ಗುರುವಾರ ಮುಂಜಾನೆ ವೇಣೂರು ಸಮೀಪ ನಡೆದ ಅಪಘಾತವೊಂದರಲ್ಲಿ ಹಿರಿಯಡ್ಕ ಮೇಳದ ಮ್ಯಾನೇಜರ್ ಕೂಡ ಆಗಿರುವ ಯಕ್ಷಗಾನ ಕಲಾವಿದ ವೇಣೂರು ವಾಮನ ಕುಮಾರ್ ಅವರು ಅಸು ನೀಗಿದ್ದಾರೆ.

ಬುಧವಾರದ ಆಟ ಮುಗಿಸಿ ಬೈಕಿನಲ್ಲಿ ಬರುತ್ತಿದ್ದ ಅವರಿಗೆ ಮಾರುತಿ ಓಮ್ನಿಯೊಂದು ಡಿಕ್ಕಿಯಾಗಿ ಈ ದುರಂತ ಸಂಭವಿಸಿದೆ ಎಂದು ತಿಳಿದುಬಂದಿದೆ. ಅವರಿಗೆ ಇಬ್ಬರು ಮಕ್ಕಳಿದ್ದು, ಇತ್ತೀಚೆಗಷ್ಟೇ ಅವರು ತಮ್ಮ ಅಕ್ಕನನ್ನು ಕಳೆದುಕೊಂಡಿದ್ದರು.

ಗುರುವಾರ ನಸುಕಿನ ಜಾವದಲ್ಲಿ ಮೂಡುಬಿದಿರೆಯ ಗಂಟಾಲಕಟ್ಟೆ ಸಮೀಪ ಈ ದುರಂತ ಸಂಭವಿಸಿದೆ. ಸುಮಾರು 30 ವರ್ಷಗಳಿಂದ ಯಕ್ಷಗಾನ ರಂಗದಲ್ಲಿ ಕಲಾವಿದರಾಗಿದ್ದು, ಇತ್ತೀಚೆಗೆ ಹಿರಿಯಡ್ಕ ಮೇಳದ ವ್ಯವಸ್ಥಾಪಕರಾಗಿ ಮೇಳವನ್ನು ಮುನ್ನಡೆಸುತ್ತಿದ್ದರು.

ಇವರು ಪತ್ನಿ, ಇಬ್ಬರು ಪುಟ್ಟ ಮಕ್ಕಳು ಹಾಗೂ ಅಪಾರ ಯಕ್ಷಗಾನ ಅಭಿಮಾನಿಗಳನ್ನು ಅಗಲಿದ್ದಾರೆ.

Leave A Reply