ಹಬ್ಬಕ್ಕೆ ಹೋಗುತ್ತಿದ್ದ ಮಹಿಳೆ ಅಪಘಾತಕ್ಕೆ ಬಲಿ | ಕೆಲವೇ ದಿನಗಳ ಹಿಂದೆ ಕುವೈಟ್‌ ‌ನಿಂದ ಊರಿಗೆ ಬಂದಿದ್ದರು

Share the Article

ಉಡುಪಿ : ಪತಿ ಮತ್ತು ಮಗನೊಂದಿಗೆ ಸಾಂತ್ಮಾರಿ ಹಬ್ಬಕ್ಕೆ ಹೋಗುತ್ತಿದ್ದ ಮಹಿಳೆಯೋರ್ವರು ರಸ್ತೆ ಅಪಘಾತಕ್ಕೆ ಒಳಗಾಗಿ ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಅವರು ಬುಧವಾರ ನಿಧನ ಹೊಂದಿದರು.

ಕೆಲವೇ ದಿನಗಳ ಹಿಂದೆ ಕುವೈಟ್‌ನಿಂದ ಆಗಮಿಸಿದ್ದ ಪತಿ ಅನಿಲ್ ಪಿಂಟೊ ಮತ್ತು 3 ವರ್ಷದ ಮಗನೊಂದಿಗೆ ಕೋಟದಲ್ಲಿರುವ ತನ್ನ ತಂದೆ ತಾಯಿ ಮನೆಗೆ ದ್ವಿಚಕ್ರ ವಾಹನದಲ್ಲಿ ಸೋಮವಾರ ತೆರಳುತ್ತಿದ್ದ ಸರಿತಾ ಪಿಂಟೊ (38), ಬ್ರಹ್ಮಾವರದಲ್ಲಿ ನಡೆದ ರಸ್ತೆ ಅಪಘಾತಕ್ಕೆ ಬಲಿಯಾಗಿದ್ದಾರೆ.

ಪತಿ ಮತ್ತು ಮಗ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದು, ತಲೆಗೆ ಗಂಭೀರ ಗಾಯಗೊಂಡಿದ್ದ ಸರಿತಾರನ್ನು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. 2 ದಿನಗಳ ಜೀವನ್ಮರಣ ಹೋರಾಟದಲ್ಲಿದ್ದ ಸರಿತಾ ಬುಧವಾರ ನಿಧನರಾಗಿದ್ದಾರೆ.

Leave A Reply