Home ದಕ್ಷಿಣ ಕನ್ನಡ ಪುತ್ತೂರು: ಅನ್ಯಕೋಮಿನ ಯುವಕರ ನಡುವೆ ಪರಸ್ಪರ ಹಲ್ಲೆ | ಲಾಠಿ ಪ್ರಹಾರ ನಡೆಸಿ ಗುಂಪು ಚದುರಿಸಿದ...

ಪುತ್ತೂರು: ಅನ್ಯಕೋಮಿನ ಯುವಕರ ನಡುವೆ ಪರಸ್ಪರ ಹಲ್ಲೆ | ಲಾಠಿ ಪ್ರಹಾರ ನಡೆಸಿ ಗುಂಪು ಚದುರಿಸಿದ ಪೊಲೀಸರು, ನಾಲ್ವರ ಬಂಧನ

Hindu neighbor gifts plot of land

Hindu neighbour gifts land to Muslim journalist

ಅನ್ಯಕೋಮಿನ ಯುವಕರ ಮಧ್ಯೆ ಮಾತಿನ ಚಕಮಕಿ ನಡೆದು ನಂತರ ಅದು ಪರಸ್ಪರ ಹಲ್ಲೆಗೆ ತಿರುಗಿ ಘಟನಾ ಸ್ಥಳಕ್ಕೆ ಪೊಲೀಸರು ಬಂದು ಲಘು ಲಾಠಿಪ್ರಹಾರದ ಮೂಲಕ ಗುಂಪು ಚದುರಿಸಿದ ಘಟನೆ ಪುತ್ತೂರಿನ ಕೆದಿಲ ಗ್ರಾಮದ ಗಡಿಯಾರದಲ್ಲಿ ತಡರಾತ್ರಿ ನಡೆದಿದೆ.

ಘಟನೆಗೆ ಸಂಬಂಧಿಸಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಗಡಿಯಾರದ ಸತ್ತಿಕಲ್ಲು ನಿವಾಸಿ ರಷ್ಪಕ್, ಪೆರ್ನೆ ನಿವಾಸಿಗಳಾದ ಹರ್ಷಿತ್, ಸತೀಶ್, ಜಗದೀಶ್ ಎನ್ನಲಾಗಿದೆ.

ಅನ್ಯಕೋಮಿನ ಯುವಕರ ನಡುವೆ ಮಾತಿನ ಚಕಮಕಿ ನಡೆದು ಹಲ್ಲೆ ನಡೆದಾಗ ಪೊಲೀಸರು ಸ್ಥಳಕ್ಕಾಗಮಿಸಿ ಗುಂಪು ಚದುರಿಸಿದ್ದಾರೆ. ಈ ವೇಳೆ ಪೊಲೀಸರೊಂದಿಗೂ ಮಾತಿನ ಚಕಮಕಿ ನಡೆದು, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದರೆನ್ನಲಾಗಿದೆ.

ಘಟನೆಗೆ ಕಾರಣರಾದ ನಾಲ್ವರನ್ನು ಪೊಲೀಸರು ಬಂಧಿಸಿದ್ದು, ಅವರ ವಿರುದ್ಧ ಸಾರ್ವಜನಿಕ ಶಾಂತಿ ಭಂಗ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.