ಮಹಿಳೆಯನ್ನು ಚಲಿಸುತ್ತಿದ್ದ ರೈಲಿಗೆ ನೂಕಿ ಕೊಲೆ ಮಾಡಿದ್ದಲ್ಲದೆ, ತಾನು ದೇವರೆಂದ ಆರೋಪಿ !!

Share the Article

ಚಲಿಸುತ್ತಿದ್ದ ರೈಲಿನ ಮುಂಭಾಗಕ್ಕೆ ಮಹಿಳೆಯೊಬ್ಬರನ್ನು ನೂಕಿದ ಕಾರಣ ಆಕೆ ಸಾವನ್ನಪ್ಪಿದ್ದು, ಆರೋಪಿಯನ್ನು ಬಂಧಿಸಲಾಗಿದೆ. ಆದರೆ ಆ ಆರೋಪಿ ನಾನು ದೇವರು, ನಾನು ಇದನ್ನು ಮಾಡಬಹುದು ಎಂಬ ವಿಚಿತ್ರ ಹೇಳಿಕೆ ನೀಡಿದ್ದಾನೆ.

ಶನಿವಾರ ನ್ಯೂಯಾರ್ಕ್ ನ ಟೈಮ್ಸ್ ಸ್ಕ್ವೇರ್ ಸುರಂಗಮಾರ್ಗ ರೈಲು ನಿಲ್ದಾಣದಲ್ಲಿ ಚಲಿಸುತ್ತಿದ್ದ ರೈಲಿನ ಎದುರು 40 ವರ್ಷದ ಏಷ್ಯನ್ ಮಹಿಳೆಯನ್ನು ಸೈಮನ್ ಮಾರ್ಷಲ್ ಎಂಬ ವ್ಯಕ್ತಿ ತಳ್ಳಿದ್ದ. ಇದರಿಂದ ಮಹಿಳೆ ರೈಲಿಗೆ ಡಿಕ್ಕಿ ಹೊಡೆದು ಸಾವನ್ನಪ್ಪಿದ್ದಳು.

ಕೊಲೆ ನಡೆದ ಸ್ಥಳದಿಂದ ವ್ಯಕ್ತಿ ಪಲಾಯನಗೈದಿದ್ದು, ನಂತರ ಒಂದು ಗಂಟೆಯ ಬಳಿಕ ಪೊಲೀಸರು ಆತನನ್ನು ಬಂಧಿಸಿದ್ದರು. ವರದಿಗಳ ಪ್ರಕಾರ ಆರೋಪಿ, ಮಾನಸಿಕ ಅಸ್ವಸ್ಥ ಎಂದು ತಿಳಿದು ಬಂದಿದೆ. ಈ ಹಿಂದೆಯೂ ಆತ ದರೋಡೆ ಪ್ರಕರಣದಲ್ಲಿ 2 ವರ್ಷಗಳ ಜೈಲು ಶಿಕ್ಷೆ ಅನುಭವಿಸಿದ್ದ. ನಂತರ 2021ರ ಆಗಸ್ಟ್‌ನಲ್ಲಿ ಜೈಲಿನಿಂದ ಬಿಡುಗಡೆಯಾಗಿದ್ದ ಎನ್ನಲಾಗಿದೆ. ಪೊಲೀಸರು ಆರೋಪಿಯನ್ನು ಪ್ರಶ್ನಿಸಿದಾಗ ಆತ ನಾನು ದೇವರು. ನಾನು ಇದನ್ನು ಮಾಡಬಲ್ಲೆ ಎಂದು ಉತ್ತರಿಸಿದ್ದಾನೆ.

Leave A Reply