ಹಿರಿಯ ವೈದ್ಯ, ಅರ್ಧ ಶತಮಾನ ಬೆಳ್ತಂಗಡಿ ಆಸುಪಾಸಿನ ಜನರಿಗೆ ವೈದ್ಯಕೀಯ ಸೇವೆ ಸಲ್ಲಿಸಿದ ತುಳುಪುಳೆ ಇನ್ನಿಲ್ಲ

Share the Article

ಸುಮಾರು ಅರ್ಧ ಶತಮಾನಕ್ಕೂ ಹೆಚ್ಚು ಕಾಲ ಬೆಳ್ತಂಗಡಿಯಲ್ಲಿ ವೈದ್ಯ ವೃತ್ತಿಯನ್ನು ನಡೆಸುತ್ತಾ ಬಂದಿರುವ ಹಿರಿಯ ವೈದ್ಯರೊಬ್ಬರು ಇಂದು ವಿಧಿವಶರಾಗಿದ್ದಾರೆ.

ಆಯುರ್ವೇದ ವೈದ್ಯರಾಗಿರುವ ವೈದ್ಯ ವಿಶಾರದ ಟಿ. ಎನ್. ತುಳಪುಳೆ ಇವರು ದೀರ್ಘಕಾಲದ ಅನಾರೋಗ್ಯದಿಂದ ಇಂದು ವಿಧಿವಶರಾಗಿದ್ದಾರೆ. ಟಿ. ಎನ್. ತುಳಪುಳೆ ಅವರಿಗೆ 88 ವರ್ಷ ವಯಸ್ಸಾಗಿತ್ತು.

ವೈದ್ಯ ವೃತ್ತಿಯ ಜತೆ ಅವರು ಸಾಹಿತ್ಯಿಕ ಆಸಕ್ತಿಯುಳ್ಳವರಾಗಿದ್ದರು. ಹರಿಕಥೆ ದಾಸರಾಗಿಯೂ ಅವರು ಗುರುತಿಸಿಕೊಂಡಿದ್ದರು. ಸಾಹಿತಿಯಾಗಿ ಹತ್ತಾರು ಕನ್ನಡ ಕೃತಿಗಳನ್ನು ರಚಿಸಿರುವ ಕೀರ್ತಿ ಟಿ. ಎನ್. ತುಳಪುಳೆ ಅವರದು. ಹಿಂದೆ ನಡೆದ ಬೆಳ್ತಂಗಡಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಕೂಡಾ ಅವರು ಕೆಲಸ ಮಾಡಿದ್ದರು.

Leave A Reply