ಕಡಬ : ಕೊಂಬಾರಿನಲ್ಲಿ ನೋಡ ನೋಡುತ್ತಿದ್ದಂತೆ ಹಿಟಾಚಿ ಬೆಂಕಿಗಾಹುತಿ

Share the Article

ಕಡಬ : ನೋಡ ನೋಡುತ್ತಿದ್ದಂತೆಯೇ ಹಿಟಾಚಿ ವಾಹನವೊಂದು ಬೆಂಕಿಗಾಹುತಿಯಾದ ಘಟನೆ ಸೋಮವಾರ ಸಂಜೆ ಕಡಬ ಸಮೀಪದ ಕೊಂಬಾರು ಎಂಬಲ್ಲಿ ನಡೆದಿದೆ.

ಉಪ್ಪಿನಂಗಡಿ ಸಮೀಪದ ಕಾಂಚನದ ಸಂಸ್ಥೆಗೆ ಸೇರಿದ ಹಿಟಾಚಿಯನ್ನು ಕೊಂಬಾರು ದೇವಸ್ಥಾನದ ಗದ್ದೆಯಲ್ಲಿ ನಿಲ್ಲಿಸಲಾಗಿದ್ದು, ನೋಡನೋಡುತ್ತಿದ್ದಂತೆಯೇ ಬೆಂಕಿಯ ಕೆನ್ನಾಲಿಗೆಗೆ ಆಹುತಿಯಾಗಿದೆ. ತಕ್ಷಣವೇ ಹಿಟಾಚಿಯ ಸಿಬ್ಬಂದಿಗಳು ಹಾಗೂ ಸ್ಥಳೀಯರು ನೀರು ಹಾಯಿಸಿ ಬೆಂಕಿಯನ್ನು ನಂದಿಸಲು ಯತ್ನಿಸಿದರಾದರೂ, ಬೆಂಕಿ ಪಸರಿಸಿದ್ದರಿಂದ ಸಂಪೂರ್ಣ ಸುಟ್ಟು ಕರಕಲಾಗಿದೆ. ಇದರಿಂದಾಗಿ ಲಕ್ಷಾಂತರ ರೂ. ನಷ್ಟ ಅಂದಾಜಿಸಲಾಗಿದೆ.

Leave A Reply