Home ದಕ್ಷಿಣ ಕನ್ನಡ ಕಡಬ ಪ್ರಖಂಡ ವಿ.ಹಿಂ.ಪ ವತಿಯಿಂದ 80 ಅಶಕ್ತ ಗೋವುಗಳನ್ನು ಮೈಸೂರು ಗೋ ಶಾಲೆಗೆ ರವಾನೆ

ಕಡಬ ಪ್ರಖಂಡ ವಿ.ಹಿಂ.ಪ ವತಿಯಿಂದ 80 ಅಶಕ್ತ ಗೋವುಗಳನ್ನು ಮೈಸೂರು ಗೋ ಶಾಲೆಗೆ ರವಾನೆ

Hindu neighbor gifts plot of land

Hindu neighbour gifts land to Muslim journalist

ಕಡಬ: ಕಡಬ ಪ್ರಖಂಡ ವಿ.ಹಿಂ.ಪ.ವತಿಯಿಂದ ಕಡಬ ಭಾಗದ ಸುಮಾರು 80 ಅಶಕ್ತ ಜಾನುವಾರುಗಳ ನ್ನು ಮೈಸೂರಿನ ಪಿಂಜರಪೂಲೆ ಗೋ ಶಾಲೆಗೆ ಜ.16 ರಂದು ರವಾನಿಸಲಾಯಿತು.

ಕಡಬದ ಸರಸ್ವತಿ ವಿದ್ಯಾಸಂಸ್ಥೆ ಯ ಆವರಣದಿಂದ ಜಾನುವಾರುಗಳನ್ನು ಐದು ಲಾರಿಗಳಲ್ಲಿ ವ್ಯವಸ್ಥಿತ ರೀತಿಯಲ್ಲಿ ಕೊಂಡೊಯ್ಯಲಾಯಿತು. ಸರಸ್ವತಿ ವಿದ್ಯಾಸಂಸ್ಥೆ ಯ ಸಂಚಾಲಕ ಮಂಕುಡೆ ವೆಂಕಟ್ರಮಣ ರಾವ್ ಚಾಲನೆ ನೀಡಿದರು. ಕಡಬ ಪಶುವೈದ್ಯಾಧಿಕಾರಿ ಡಾ.ಅಜಿತ್ ಅವರು ಜಾನುವಾರುಗಳನ್ನು ಪರೀಕ್ಷೆ ನಡೆಸಿದರು.

ಈ ಸಂದರ್ಭದಲ್ಲಿ ಕಡಬ ಪ್ರಖಂಡ ಅಧ್ಯಕ್ಷ ರಾಧಾಕೃಷ್ಣ ಕೋಲ್ಪೆ, ಕಾರ್ಯದರ್ಶಿ ಪ್ರಮೋದ್ ರೈ ನಂದುಗುರಿ, ಬಜರಂಗದಳದ ಸಾಪ್ತಾಹಿಕ ಪ್ರಮುಖ್ ತಿಲಕ್ ರೈ ಕಡಬ , ರಘುರಾಮ ನಾಯ್ಕ್ ಕಡಬ , ಜಯಂತ ಕುತ್ಯಾಡಿ , ರಕ್ಷಿತ್ ದೋಳ , ತಿರ್ಥೇಶ್ ಮೀನಾಡಿ , ಸಂತೋಷ್ ದೋಳ, ಗುರುಮೂರ್ತಿ ವಿದ್ಯಾನಗರ , ಹರ್ಷಿತ್ ವಿದ್ಯಾನಗರ , ಸಂಕೇತ್ ಹೊಸಮಠ , ಹರ್ಷಿತ್ ಗಣಾದ ಕೊಟ್ಟಿಗೆ, ಪವಿತ್ ರಾಜ್ ಹೊಸಮಠ ,
ಮಾ| ಚಿರಾಗ್ ಮೊದಲಾದವರು ಉಪಸ್ಥಿತರಿದ್ದರು.