ಪುತ್ತೂರು : ಹೆತ್ತು,ಹೊತ್ತು ಸಾಕಿದ ತಾಯಿಯನ್ನೇ ಅತ್ಯಾಚಾರಗೈದ ಪಾಪಿ‌ ಮಗನ ಬಂಧನ

Share the Article

ಪುತ್ತೂರು :ಹೊತ್ತು, ಹೆತ್ತು ಸಾಕಿ ಸಲಹಿದ ತಾಯಿಯನ್ನೇ ಮಗ ಅತ್ಯಾಚಾರಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಿರಾತಕ ಮಗನನ್ನು ಪುತ್ತೂರು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.

ಪುತ್ತೂರು ತಾಲೂಕಿನ ಕೆದಂಬಾಡಿ ಗ್ರಾಮದ ಕುರಿಕ್ಕಾರದಲ್ಲಿ ಈ ಘಟನೆ ನಡೆದಿದೆ. ಸಂತ್ರಸ್ತ ಮಹಿಳೆ ನೀಡಿದ ದೂರಿನಂತೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಆರೋಪಿ ಮಗನ ವಿರುದ್ಧ ಪ್ರಕರಣ ದಾಖಲಾಗಿದೆ.

ಘಟನೆ ವಿವರ

ಕೆದಂಬಾಡಿ ಕುರಿಕ್ಕಾರದ ಜಯರಾಮ ರೈ ಅತ್ಯಾಚಾರ ಎಸಗಿರುವ ಆರೋಪಿ. 58 ವರ್ಷ ಪ್ರಾಯದ ತನ್ನ ತಾಯಿಯೊಂದಿಗೆ ವಾಸವಾಗಿರುವ ಜಯರಾಮ ಜ.12ರಂದು ಎಂದಿನಂತೆ ರಾತ್ರಿ ಊಟ ಮಾಡಿ ಅವರ ರೂಮ್ ನಲ್ಲಿ ಮಲಗಿದ್ದ. ಮುಂಜಾನೆ 3 ಗಂಟೆಯ ವೇಳೆಗೆ ತಾಯಿ ಮಲಗಿದ್ದ ರೂಮ್ ಗೆ ಹೋಗಿ ಜಯರಾಮ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಈ ಸಂದರ್ಭದಲ್ಲಿ ತಾಯಿ ಆತನನ್ನು ತಳ್ಳಿ ಬೊಬ್ಬೆ ಹಾಕಿದಾಗ ಆತ ತಾಯಿಯ ಬಾಯಿಯನ್ನು, ಬಟ್ಟೆಯಿಂದ ಒತ್ತಿ ಹಿಡಿದು ಬೊಬ್ಬೆ ಹಾಕದಂತೆ ಬೆದರಿಕೆ ಹಾಕಿ ತಾಯಿ ಪ್ರತಿಭಟಿಸಿದರೂ ಬಲವಂತವಾಗಿ ಅತ್ಯಾಚಾರ ಮಾಡಿದ್ದಾನೆ. ಈ ವಿಚಾರವನ್ನು ಯಾರಲ್ಲಾದರೂ ತಿಳಿಸಿದರೆ ಕೊಂದು ಬಿಡುವುದಾಗಿ ಬೆದರಿಕೆ ಹಾಕಿದ್ದಾನೆ. ಇದಾದ ಬಳಿಕ ಜ.13ರಂದು ಬೆಳಿಗ್ಗೆ 07.45ಕ್ಕೆ ತಾಯಿ ಅಡುಗೆ ಕೋಣೆಯಲ್ಲಿದ್ದ ಸಂದರ್ಭದಲ್ಲಿ ಅಲ್ಲಿಗೆ ಬಂದ ಜಯರಾಮ ಬಲವಂತದಿಂದ ಅವರನ್ನು ಮನೆಯ ಹಾಲ್‌ಗೆ ಎಳೆದುಕೊಂಡು ಹೋಗಿ ಅತ್ಯಾಚಾರ ಮಾಡಿದ್ದಾನೆ ಎಂದು ಕೇಸು ದಾಖಲಿಸಲಾಗಿದೆ.

ಮಗನ ಕೃತ್ಯದಿಂದ ಅಸ್ವಸ್ಥಗೊಂಡಿರುವ ಮಹಿಳೆ ಮಧ್ಯಾಹ್ನ 1 ಗಂಟೆಗೆ ಪುತ್ತೂರು ಸರಕಾರಿ ಸಾರ್ವಜನಿಕ ಆಸ್ಪತ್ರೆಗೆ ಬಂದಾಗ ವೈದ್ಯರು ಪರೀಕ್ಷಿಸಿ, ಒಳರೋಗಿಯಾಗಿ ದಾಖಲಿಸಿಕೊಂಡಿದ್ದಾರೆ. ಬಲವಂತವಾಗಿ ಅತ್ಯಾಚಾರ ನಡೆಸಿ,ಜೀವ ಬೆದರಿಕೆ ಒಡ್ಡಿದ ಮಗ ಜಯರಾಮನ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಮಹಿಳೆ ದೂರು ನೀಡಿದ್ದಾರೆ. ದೂರು ಸ್ವೀಕರಿಸಿಕೊಂಡಿರುವ ಪೊಲನಡೆದ ಆರೋಪಿಯ ವಿರುದ್ಧ ಐಪಿಸಿ ಸೆಕ್ಷನ್ 376(2)(n)506 ರಂತೆ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Leave A Reply