ನಾಪತ್ತೆಯೆಂದು ಸಹೋದರಿಯರಿಂದ ದಾಖಲಾದ ಪ್ರಕರಣದ ಸತ್ಯ ಕಟ್ಟೆಯೊಡೆದಾಗ ಬಯಲಾಯಿತು ಕೊಲೆಯ ರಹಸ್ಯ

Share the Article

ಕಳೆದ ಎರಡು ವಾರಗಳ ಹಿಂದೆ ಠಾಣೆಯಲ್ಲಿ ದಾಖಲಾದ ನಾಪತ್ತೆ ಪ್ರಕರಣವೊಂದರ ಬೆನ್ನು ಬಿದ್ದ ಪೊಲೀಸರೇ ಬೆಚ್ಚಿಬೀಳುವಂತಹ ಮಾಹಿತಿಯೊಂದು ಹೊರಬಿದ್ದಿದ್ದು, ಮಾಹಿತಿಯ ಆಧಾರದಲ್ಲಿ ತನಿಖೆ ಮುಂದುವರಿಸಿದಾಗ ಕೊಲೆ ಪ್ರಕರಣದ ಆರೋಪಿಗಳ ಮುಖವಾಡ ಕಳಚಿ ಬಿದ್ದಿದೆ.

ಘಟನೆ ವಿವರ: ಚತ್ತಿಸ್ ಗಢ ರಾಜ್ಪುರದ ಬಲರಾಮ್ ಪುರ ಜಿಲ್ಲೆಯ ಬಗಾಡಿ ಗ್ರಾಮದಲ್ಲಿ ಯುವಕನೋರ್ವ ಕಾಣೆಯಾಗುತ್ತಾನೆ. ಕಾಣೆಯಾದ ಯುವಕನನ್ನು ಮುಖೇಶ್ ಮರವಿ ಎಂದು ಗುರುತಿಸಲಾಗಿದ್ದು,ಆತನ ಒಡಹುಟ್ಟಿದ ಸಹೋದರಿಯರು ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದು, ಆದರೆ ಅವರೇ ಸೇರಿ ಕೊಲೆ ನಡೆಸಿದ್ದಾರೆ ಎಂಬ ಬಹಿರಂಗ ಮಾಹಿತಿಯೊಂದು ತನಿಖೆಯ ಬಳಿಕ ಬಯಲಾಗಿದೆ.

ಮೃತ ಯುವಕನಿಗೆ ತನ್ನ ಒಡಹುಟ್ಟಿದವ ಸಹೋದರಿಯರೊಂದಿಗೆ ಅಕ್ರಮ ಸಂಬಂಧವಿದ್ದು, ಇವರ ಸಂಬಂಧಕ್ಕೆ ಇನ್ನೊರ್ವಳ ಎಂಟ್ರಿ ಆದದ್ದೇ ಈ ಕೊಲೆಗೆ ಪ್ರಮುಖ ಕಾರಣವೆಂದು ಹೇಳಲಾಗಿದೆ.ಓರ್ವ ಸಹೋದರಿ ತನ್ನ ಗಂಡನನ್ನು ತೊರೆದು ಬಂದಿದ್ದು, ಇನ್ನೊಬ್ಬ ಸಹೋದರಿ ಕೂಡಾ ಮುಖೇಶ್ ನ ಜೊತೆಗೆ ಮನೆಯಲ್ಲಿ ಇದ್ದಳು.

ಈ ನಡುವೆ ಇಬ್ಬರು ಸಹೋದರಿಯರೊಂದಿಗೆ ಸಲುಗೆಯ ಸಂಬಂಧ ಹೊಂದಿದ್ದ ಮುಖೇಶ್ ಬಾಳಿನಲ್ಲಿ ಇನ್ನೊಬ್ಬ ಸ್ತ್ರೀ ಯ ಪ್ರವೇಶವಾಗುತ್ತಿದ್ದಂತೆ ಸಹೋದರಿಯರು ಮುನಿಸಿಕೊಂಡಿದ್ದು, ಆತನ ಹೊಡೆದು ಕೊಲೆ ನಡೆಸಿದ್ದಾರೆ.

Leave A Reply