ಹಾಡಹಗಲೇ ಕಣ್ಣಿಗೆ ಖಾರದ ಪುಡಿ ಎರಚಿ ಯುವಕನಿಂದ ನಾಲ್ಕು ಲಕ್ಷ ದರೋಡೆ!! ಹಣ ಕಳೆದುಕೊಂಡ ಯುವಕನಿಂದ ಠಾಣೆಗೆ ದೂರು-ಪೊಲೀಸರಾ ಖಾರದ ವಿಚಾರಣೆಗೆ ಬಯಲಾಯಿತು ಖಾರದಪುಡಿಯ ಪ್ರಹಸನ

Share the Article

ಬೆಂಗಳೂರು: ಸಂಸ್ಥೆಯೊಂದರ ಮಾಲೀಕನ ಹಣವನ್ನು ತೆಗೆದುಕೊಂಡು ಹೋಗುತ್ತಿದ್ದ ಯುವಕನೋರ್ವನಿಗೆ ಖಾರದ ಪುಡಿ ಎರಚಿ ನಾಲ್ಕು ಲಕ್ಷ ದೋಚಿದ್ದಾರೆ ಎಂಬ ನಾಟಕದ ಮುಖವೊಂದು ಠಾಣೆಯಲ್ಲಿ ಕಳಚಿಬಿದ್ದಿದ್ದು,ದೂರು ನೀಡಿದಾತನನ್ನೇ ಬಂಧಿಸಲಾಗಿದೆ.ಬಂಧಿತ ಆರೋಪಿಯನ್ನು ಅರುಣ್ ಎಂದು ಗುರುತಿಸಲಾಗಿದ್ದು, ಈತನೇ ತನ್ನ ಕಣ್ಣಿಗೆ ಖಾರದ ಪುಡಿ ಎರಚಿ ಯಾರೋ ಹಣ ಎಗರಿಸಿದ್ದಾರೆ ಎಂದು ಠಾಣೆಯ ಮೆಟ್ಟಿಲೇರಿದ್ದ.

ಘಟನೆ ವಿವರ: ಬಂಧಿತ ಅರುಣ್ ತನ್ನ ಮಾಲೀಕನ ಬಳಿ ಒಂದು ಲಕ್ಷ ಸಾಲ ಕೇಳಿದ್ದನಂತೆ. ಮಾಲೀಕ ಸಾಲ ಕೊಡಲು ಒಪ್ಪಿರಲಿಲ್ಲ ಎಂಬ ಕಾರಣಕ್ಕೆ ಸಂಸ್ಥೆಯ ಒಟ್ಟು 8 ಲಕ್ಷ ಹಣದಲ್ಲಿ ನಾಲ್ಕು ಲಕ್ಷವನ್ನು ತನ್ನ ಮನೆಯಲ್ಲಿ ಬಚ್ಚಿಟ್ಟು,ಬರೀ 4 ಲಕ್ಷವನ್ನು ಮಾಲೀಕನಿಗೆ ನೀಡಲು ಹೊರಟಿದ್ದ.

ಈ ಸಂದರ್ಭ ರಸ್ತೆ ಬದಿಯಲ್ಲಿ ಕಣ್ಣಿಗೆ ಖಾರದ ಪುಡಿ ಬಿದ್ದು ಉರಿ ತಾಳಲಾರದೆ ಪರದಾಡುವಂತಹ ನಾಟಕವಾಡಿ ನಾಲ್ಕು ಲಕ್ಷ ಹಣವನ್ನು ಯಾರೋ ದರೋಡೆ ನಡೆಸಿದ್ದಾರೆ ಕಾಪಾಡಿ ಕಾಪಾಡಿ ಎಂದು ಗೋಗರೆದಿದ್ದಾನೆ. ಅದಲ್ಲದೇ ಠಾಣೆಗೂ ತೆರಳಿ ಕೇಸ್ ಕೊಟ್ಟಿದ್ದಾನೆ. ಕೂಡಲೇ ಫೀಲ್ಡ್ ಗಿಳಿದ ಪೊಲೀಸರಿಗೆ ಈತನ ಓವರ್ ಆಕ್ಟಿಂಗ್ ನಿಂದಾಗಿ ಅನುಮಾನ ಬಂದು ವಿಚಾರಿಸಿದಾಗ ತಾನೇ ಕದ್ದು, ಖಾರದ ಪುಡಿ ಎರಚಿದ ನಾಟಕವಾಡಿದ್ದಾಗಿ ಒಪ್ಪಿಕೊಂಡಿದ್ದಾನೆ.

Leave A Reply