ದೈವನಿಂದನೆ ಹಾಗೂ ಪ್ರಧಾನಿ ಮೋದಿ ಅವರ ಮೇಲೆ ನಡೆದ ಭದ್ರತಾ ವೈಫಲ್ಯದ ಪಿತೂರಿಯ ವಿರುದ್ಧ ಧರ್ಮಸ್ಥಳ ಮಂಜುನಾಥನಿಗೆ ಪ್ರಾರ್ಥನೆ ಸಲ್ಲಿಸಿದ ವಿಹಿಂಪ, ಬಜರಂಗದಳ, ದುರ್ಗಾ ವಾಹಿನಿ ಮಾತೃ ಮಂಡಳಿ ಧರ್ಮಸ್ಥಳ

Share the Article

ಜಿಲ್ಲೆಯಾದ್ಯಂತ ನಡೆಯುತ್ತಿರುವ ದೈವನಿಂದನೆ ಅವಹೇಳನಕಾರಿ ಘಟನೆಗಳು ಹಾಗೂ ಪ್ರಧಾನಿ ನರೇಂದ್ರ ಮೋದಿಜಿಯವರ ಮೇಲೆ ನಡೆದಂತಹ ಭದ್ರತಾ ವೈಫಲ್ಯವೆಂಬ ಪಿತೂರಿಯ ವಿರುದ್ಧ ವಿಶ್ವಹಿಂದು ಪರಿಷತ್, ಬಜರಂಗದಳ, ದುರ್ಗಾವಾಹಿನಿ ಮಾತೃಮಂಡಳಿ ಧರ್ಮಸ್ಥಳ ವತಿಯಿಂದ ಧರ್ಮಸ್ಥಳ ಶ್ರೀ ಮಂಜುನಾಥ ಸನ್ನಿಧಿಯಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು.

ತಪ್ಪಿತಸ್ಥರಿಗೆ ಶೀಘ್ರ ಶಿಕ್ಷೆಯಾಗುವಂತೆ ಶ್ರೀಸ್ವಾಮಿಯಲ್ಲಿ, ಅಣ್ಣಪ್ಪಸ್ವಾಮಿಯಲ್ಲಿ ಹಾಗೂ ಧರ್ಮದೇವತೆಗಳ ಬಳಿ ಭಿನ್ನಹ ಮಾಡಿಕೊಳ್ಳಲಾಯಿತು.

ಪರಿವಾರ ಸಂಘಟನೆಯ ಮುಖಂಡರು, ಕಾರ್ಯಕರ್ತರು, ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.

Leave A Reply