ಪತ್ನಿಯರನ್ನು ಹಂಚಿಕೊಳ್ಳುತ್ತಿದ್ದ ಜಾಲ ಬಯಲು

Share the Article

ಕೇರಳ : ವೈಫ್​​ ಸ್ವ್ಯಾಪಿಂಗ್​ ಅಥವಾ ಸೆಕ್ಸ್​​​ ಗಾಗಿ ಪತ್ನಿಯರನ್ನು ಪರಸ್ಪರ ಹಂಚಿಕೊಳ್ಳುವ ದೊಡ್ಡ ಜಾಲವೊಂದು ಬಯಲಾಗಿದೆ.

ಈ ಸಂಬಂಧ ಕೇರಳದ ಕೊಟ್ಟಾಯಂನಲ್ಲಿ 6 ಮಂದಿಯನ್ನು ಬಂಧಿಸಲಾಗಿದೆ.

ಕೊಟ್ಟಾಯಂ ಜಿಲ್ಲೆಯ ವೈಫ್​​ ಸ್ವ್ಯಾಪಿಂಗ್ ಗ್ಯಾಂಗ್ ​ನ 6 ಸದಸ್ಯರನ್ನು ಕರುಕಾಚಲ ಪೊಲೀಸರು ಬಂಧಿಸಿದ್ದಾರೆ.

ಚಂಗನಾಶ್ಶೇರಿ ಮೂಲದ ಮಹಿಳೆಯೊಬ್ಬರ ದೂರಿನ ಮೇರೆಗೆ ತನಿಖೆ ನಡೆಸಿದಾಗ ಅನಾಚಾರ ಬಯಲಾಗಿದೆ.

ಘಟನೆಗೆ ಸಂಬಂಧಿಸಿದಂತೆ ಆರು ಮಂದಿಯನ್ನು ಬಂಧಿಸಲಾಗಿದ್ದು, ಶೀಘ್ರವೇ ಹೆಚ್ಚಿನ ಮಾಹಿತಿ ನೀಡಲಾಗುವುದು ಎಂದು ಕರುಕಾಚಲ ಪೊಲೀಸರು ತಿಳಿಸಿದ್ದಾರೆ. ಶಂಕಿತರು ಅಲಪ್ಪುಳ, ಕೊಟ್ಟಾಯಂ ಮತ್ತು ಎರ್ನಾಕುಲಂ ಜಿಲ್ಲೆಗಳವರು ಎಂದು ತಿಳಿದು ಬಂದಿದೆ.

Leave A Reply