ಐಷರಾಮಿ ಪರಿಸರ ಸ್ನೇಹಿ ಹ್ಯಾಂಡ್ ಬ್ಯಾಗ್ : ಇದರ ವಿಶೇಷತೆ ತಿಳಿದರೆ ನೀವು ಮೂಗಿನ ಮೇಲೆ ಬೆರಳಿಡುವುದು ಖಂಡಿತ !!!
ಈಗ ಹೊಸ ಹೊಸ ಟ್ರೆಂಡ್ ಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತದೆ. ಯಾವ ಶೈಲಿಯ ವಸ್ತು, ಯಾವ ರೀತಿಯ ವಸ್ತುಗಳು ಬೇಕೋ ಎಲ್ಲವೂ ನಮ್ಮ ಕಲ್ಪನೆಗೂ ಮೀರಿ ನಮಗೆ ಇಂದು ದೊರಕುತ್ತದೆ. ಅದೂ ಕೂಡಾ ಕಡಿಮೆ ಬೆಲೆಯಲ್ಲಿ. ಹಲವಾರು ವಿಧದ ಫ್ಯಾಷನ್ ವಸ್ತುಗಳಿಗೇನೂ ಈಗ ಕೊರತೆಯಿಲ್ಲ.
ಈ ಸಾಲಿಗೆ ಸೇರಿರೋ ಹೊಸ ವಸ್ತು ಒಂದು ಬಂದಿದೆ. ಅದೇನೆಂದರೆ, ವಿಭಿನ್ನ ಶೈಲಿಯ ಹ್ಯಾಂಡ್ ಬ್ಯಾಗ್ ಸೇರ್ಪಡೆಯಾಗಿದೆ. ಇದನ್ನು ನೋಡಿದ ಹಲವಾರು ಮಂದಿ ಹೀಗೂ ಉಂಟೆ ಅಂತ ಮೂಗಿನ ಮೇಲೆ ಬೆರಳಿಟ್ಟಿದ್ದಾರೆ.
ಖ್ಯಾತ ಆಹಾರ ಕಲಾವಿದ ಹಾಗೂ ಮಾಲಿಕ್ಯೂಲಾರ್ ಗ್ಯಾಸ್ಟ್ರೋನಿಮಿಸ್ಟ್ ಓಮರ್ ಸರ್ತವಿ ಅವರು ಕಿತ್ತಳೆ ಹಣ್ಣಿನ ಸಿಪ್ಪೆಗಳಿಂದ ಹ್ಯಾಂಡ್ ಬ್ಯಾಗ್ ನ್ನು ತಯಾರಿಸಿದ್ದಾರೆ. ಡಿಜಿಟಲ್ ಫ್ಯಾಬ್ರಿಕೇಷನ್ ನ ಸಹಾಯದಿಂದ ಲೇಸರ್ ಹಾಗೂ ಕಿತ್ತಳೆ ಹಣ್ಣಿನ ಸಿಪ್ಪೆಯಿಂದ ಈ ಬ್ಯಾಗ್ ನ್ನು ತಯಾರಿಸಿದ್ದಾರೆ. ಈ ಹ್ಯಾಂಡ್ ಬ್ಯಾಗ್ ಅನ್ನು ತಯಾರಿಸಲು ಅವರಿಗೆ ಸುಮಾರು ಎರಡು ವಾರಗಳು ಬೇಕಾಗಿದೆ.
ಹಣ್ಣುಗಳು ಹಾಗೂ ತರಕಾರಿ ಸಿಪ್ಪೆ ಗಳನ್ನು ಬಿಸಾಡುವ ಬದಲು ಅದನ್ನು ಪರಿಸರ ಸ್ನೇಹಿ, ಐಷಾರಾಮಿ ವಸ್ತುಗಳನ್ನಾಗಿ ಪರಿವರ್ತಿಸುವ ಗುರಿ ಹೊಂದಿರುವುದಾಗಿ ಹಾಗೂ ಅತ್ಯಾಧುನಿಕ ಐಷರಾಮಿ ಬ್ಯಾಗ್ , ಫ್ಯಾಷನ್ ವಸ್ತುಗಳು ತಯಾರಿಸಿದ್ದಾಗಿ ಓಮರ್ ತಿಳಿಸಿದ್ದಾರೆ.
ಓಮರ್ ಅವರು ಬದನೆಕಾಯಿ ಸಿಪ್ಪೆಯಿಂದ ಈ ಹಿಂದೆ ಮಾಸ್ಕ್ ತಯಾರಿಸಿ ಸುದ್ದಿಯಾಗಿದ್ದರು.
ಈ ಹ್ಯಾಂಡ್ ಬ್ಯಾಗ್ ವೀಡಿಯೋ ಹಾಗೂ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಓಮರ್ ಪೋಸ್ಟ್ ಮಾಡಿದ್ದಾರೆ.