ಕೋವಿಡ್ ಸೋಂಕು ತಡೆಯಲು ಕಠಿಣ ಕ್ರಮಗಳು ಜಾರಿ ಆದರೆ ಸಂಪೂರ್ಣ ಲಾಕ್‌ಡೌನ್ ಇಲ್ಲ -ಸಚಿವ ಡಾ.ಕೆ. ಸುಧಾಕರ್

Share the Article

ಬೆಂಗಳೂರು : ರಾಜ್ಯದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಕೋವಿಡ್ ಸೋಂಕನ್ನು ತಡೆಯಲು ಕಠಿಣ ಕ್ರಮಗಳನ್ನು ಜಾರಿಗೆ ತರಲಾಗಿದೆ. ಜನ ಭಯಪಡುವ ಅಗತ್ಯವಿಲ್ಲ ,ರಾಜ್ಯದಲ್ಲಿ ಇನ್ನು ಮುಂದೆ ಸಂಪೂರ್ಣ ಲಾಕ್ ಡೌನ್ ವಿಷಯವೇ ಇಲ್ಲ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

ಸಂಪೂರ್ಣ ಲಾಕ್ ಡೌನ್ ಕಳೆದುಹೋದ ನೀತಿ, ಆರಂಭದಲ್ಲಿ ಸೋಂಕಿನ ಚಿಕಿತ್ಸಾ ವಿಧಾನದ ಬಗ್ಗೆ ಅರಿವಿಲ್ಲದ ಕಾರಣ ಸಂಪೂರ್ಣ ಲಾಕ್ಡೌನ್ ವಿಧಿಸಲಾಗಿತ್ತು. ಲಾಕ್ ಡೌನ್ ನಿಂದ ಸೋಂಕನ್ನು ತಡೆಗಟ್ಟಲು ಸಾಧ್ಯವಿಲ್ಲ. ಲಸಿಕೆ ಮತ್ತು ಮುನ್ನೆಚ್ಚರಿಕೆ ಕ್ರಮಗಳಿಂದ ಮಾತ್ರ ಸಾಧ್ಯ.ಜನರಿಗೆ ತೊಂದರೆ ಕೊಡದೆ, ನಿಯಮಗಳನ್ನು ಜಾರಿಗೆ ತರುತ್ತೇವೆ ಎಂದು ತಿಳಿಸಿದ್ದಾರೆ.

Leave A Reply