ಪ್ರಾಣಕ್ಕೆ ಕುತ್ತಾದ ‘ನೀರಿನ ಬಾಟಲ್..!

Share the Article

ಕೆಲವೊಮ್ಮೆ ಒಂದು ಸಣ್ಣ ತಪ್ಪು ನಿಮ್ಮ ಜೀವವನ್ನೇ ತೆಗೆಯಬಹುದು. ನೋಯ್ಡಾ-ಗ್ರೇಟರ್ ನೋಯ್ಡಾ ಎಕ್ಸ್‌ಪ್ರೆಸ್ ವೇ ಯಲ್ಲಿ ಇದೇ ರೀತಿ ಆಗಿದೆ.

ಕಾರಿನಲ್ಲಿ ಇಟ್ಟಿದ್ದ ನೀರಿನ ಬಾಟಲಿಯಿಂದಾಗಿ ಎಂಜಿನಿಯರ್ ಪ್ರಾಣ ಕಳೆದುಕೊಂಡಿದ್ದಾರೆ. ದೆಹಲಿಯಲ್ಲಿ ವಾಸಿಸುತ್ತಿರುವ ಎಂಜಿನಿಯರ್‌ ಅಭಿಷೇಕ್‌ ಝಾ ತನ್ನ ಸ್ನೇಹಿತನೊಂದಿಗೆ ಗ್ರೇಟರ್ ನೋಯಾಕ್ಕೆ ಹೋಗುತ್ತಿದ್ದರು.

ಅವರ ಕಾರು ರಸ್ತೆಯ ಬದಿಯಲ್ಲಿ ನಿಲ್ಲಿಸಿದ್ದ ಟ್ರಕ್‌ಗೆ ಡಿಕ್ಕಿ ಹೊಡೆದಿದೆ. ಇದು ಅವನ ಸಾವಿಗೆ ಅತ ಕಾರಣವಾಯಿತು. ಆದ್ರೆ, ಆತನ ಸ್ನೇಹಿತ ಗಂಭೀರವಾಗಿ ಗಾಯಗೊಂಡಿದ್ದಾನೆ. ವಾಹನದಲ್ಲಿದ್ದ ನೀರಿನ ಬಾಟಲಿಯೇ ಅಪಘಾತಕ್ಕೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.

ಅಭಿಷೇಕ್ ಕಾರನ್ನು ಚಾಲನೆ ಮಾಡುತ್ತಿದ್ದಾಗ, ಕಾರಿನ ಇರಿಸಲಾದ ನೀರಿನ ಬಾಟಲಿ, ಅಭಿಷೇಕ್ ಅವರ ಪಾದಗಳ ಕೆಳಗೆ ಜಾರಿದೆ. ಟ್ರಕ್ ಸಮೀಪಿಸುತ್ತಿದ್ದಂತೆ, ಕಾರನ್ನ ನಿಲ್ಲಿಸಲು ಆತ ಬ್ರೇಕ್ ಹಾಕಿದ್ದಾನೆ. ಆದಾಗ್ಯೂ
ಬ್ರೇಕ್ ಪೆಟಲ್ ಕೆಳಗೆ ನೀರಿನ ಬಾಟಲಿ ಬಂದಿದ್ದು,ಬ್ರೇಕ್‌ಗಳು ಸಿಲುಕಿಕೊಂಡಿವೆ, ಕಾರು ಟ್ರಕ್‌ಗೆ ಅಪ್ಪಳಿಸಿದೆ.

Leave A Reply