Home News ಹೊಸವರ್ಷದ ಪಾರ್ಟಿಯ ಬಾಡೂಟಕ್ಕಾಗಿ ಕುರಿಯನ್ನೇ ಕದ್ದ ಪೊಲೀಸ್ ಮಾಮ!!

ಹೊಸವರ್ಷದ ಪಾರ್ಟಿಯ ಬಾಡೂಟಕ್ಕಾಗಿ ಕುರಿಯನ್ನೇ ಕದ್ದ ಪೊಲೀಸ್ ಮಾಮ!!

Hindu neighbor gifts plot of land

Hindu neighbour gifts land to Muslim journalist

ಹೊಸವರ್ಷವನ್ನು ಅದ್ಧೂರಿಯಾಗಿ ಭರ್ಜರಿ ಬಾಡೂಟದೊಂದಿಗೆ ಆಚರಿಸಬೇಕೆಂಬುದು ಹಲವರ ಆಸೆ. ಹಾಗೆಯೇ ಇನ್ನೊಂದು ಕಡೆ ಭರ್ಜರಿ ಬಾಡೂಟವನ್ನು ಮಾಡಬೇಕು ಎನ್ನುವ ಆಸೆಯಿಂದ ಪೊಲೀಸ್ ಅಧಿಕಾರಿಯೊಬ್ಬರು ಕುರಿಯನ್ನು ಕದ್ದಿರುವ ಸುದ್ದಿ ತಡವಾಗಿ ಬೆಳಕಿಗೆ ಬಂದಿದೆ.

ಸುಮನ್ ಮಲ್ಲಿಕ್ ಎಂಬಾತನೇ ಕುರಿ ಕದ್ದ ಸಬ್ ಇನ್ಸ್‌ಪೆಕ್ಟರ್. ಇವರು ಒಡಿಶಾದ ಬಲಂಗೀರ್ ಜಿಲ್ಲೆಯ ಸಿಂಧೇಕೆಲಾ ಪೊಲೀಸ್ ಠಾಣೆಯಲ್ಲಿ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ತನ್ನ ಸ್ನೇಹಿತರೊಂದಿಗೆ ಸೇರಿ ಹೊಸ ವರ್ಷಕ್ಕೆ ಎರಡು ಮೇಕೆಗಳನ್ನು ಕದ್ದಿದ್ದಾರೆ. ಸಬ್ ಇನ್ಸ್‌ಪೆಕ್ಟರ್ ಕುರಿಯನ್ನು ಕದ್ದಿರುವ ವಿಚಾರ ಮೇಕೆಗಳ ಮಾಲೀಕರಿಗೆ ಗೊತ್ತಾಗಿದೆ. ಮೇಕೆಗಳನ್ನು ಬಿಟ್ಟುಬಿಡುವಂತೆ ಮನವಿ ಮಾಡಿದ್ದಾರೆ. ಆದರೆ ಒಪ್ಪದ ಸುಮನ್ ಮಲಿಕ್ ಹೊಸ ವರ್ಷಕ್ಕೆ ಮೇಕೆಗಳನ್ನು ಕಡಿದು ಭಾರಿ ಭೋಜನ ತಯಾರಿಸಿ, ಸವಿದಿದ್ದಾರೆ ಎನ್ನಲಾಗಿದೆ.

ಅಸಮಾಧಾನಗೊಂಡ ಗ್ರಾಮಸ್ಥರು ಸಿಂಧೇಕೆಲಾ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ್ದಾರೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಬಲಂಗೀರ್ ಪೊಲೀಸ್ ವರಿಷ್ಠಾಧಿಕಾರಿಯು ಸುಮನ್ ಮಲ್ಲಿಕ್‍ನನ್ನು ಅಮಾನತುಗೊಳಿಸಿ, ತನಿಖೆಗೆ ಆದೇಶಿಸಿದ್ದಾರೆ. ಸ್ನೇಹಿತರ ಜೊತೆಗೆ ಪಾರ್ಟಿ ಮಾಡಲು ಹೋಗಿ ಸಬ್ ಇನ್ಸ್‌ಪೆಕ್ಟರ್ ಇದೀಗ ದೊಡ್ಡ ಫಜೀತಿಗೆ ಸಿಲುಕಿರುವುದಂತು ಸತ್ಯ.