Home Health ಕೊರೊನಾ ಬಗ್ಗೆ ವೈದ್ಯರಿಂದ ವಿಚಿತ್ರವಾದ ವಾದ | ಒಮಿಕ್ರಾನ್ ಅನ್ನು ಆದಷ್ಟು ಬೇಗ ಹರಡಲು ಬಿಡಿ...

ಕೊರೊನಾ ಬಗ್ಗೆ ವೈದ್ಯರಿಂದ ವಿಚಿತ್ರವಾದ ವಾದ | ಒಮಿಕ್ರಾನ್ ಅನ್ನು ಆದಷ್ಟು ಬೇಗ ಹರಡಲು ಬಿಡಿ ಎಂದು ವಾದ ಶುರುವಿಟ್ಟ ತಜ್ಞರು

Hindu neighbor gifts plot of land

Hindu neighbour gifts land to Muslim journalist

ಕೊರೊನಾ ವೈರಸ್ ಹೊಸ ರೂಪಾಂತರ ಒಮಿಕ್ರಾನ್ ವಿಶ್ವಾದ್ಯಂತ ಹಾನಿಯನ್ನುಂಟುಮಾಡ್ತಿದೆ. ಒಮಿಕ್ರಾನ್ ರೂಪವು ಜನರಲ್ಲಿ ವೇಗವಾಗಿ ಹರಡುತ್ತಿದೆ ಎಂಬುದು ಗೊತ್ತಾಗಿದ್ದರೂ, ಅದರಿಂದ ಉಂಟಾಗುವ ಸಾವಿನ ಬಗ್ಗೆ ಖಚಿತ ಮಾಹಿತಿ ಇಲ್ಲ. ಈಗ ಲಭ್ಯವಿರುವ ದಕ್ಷಿಣ ಆಫ್ರಿಕಾ ಮತ್ತು ಬ್ರಿಟನ್ ನ ಅಂಕಿ ಅಂಶಗಳನ್ನು ನೋಡಿದರೆ, ಆಸ್ಪತ್ರೆಗೆ ದಾಖಲಾದ ಮತ್ತು ಸಾವನ್ನಪ್ಪಿದ ಒಮಿಕ್ರಾನ್ ರೋಗಿಗಳ ಸಂಖ್ಯೆ ಕಡಿಮೆ. ಆದರೂ ನಿರ್ಲಕ್ಷ್ಯ ಬೇಡವೆಂದು ವೈದ್ಯರು ಎಚ್ಚರಿಕೆ ನೀಡುತ್ತಿದ್ದಾರೆ.

ಆದ್ರೆ ಈ ಮಧ್ಯೆ ಕೆಲ ವಿಜ್ಞಾನಿಗಳು ವಿಚಿತ್ರವಾದ ಮಂಡನೆ ಮಾಡಿ ಸುದ್ದಿಯಲ್ಲಿದ್ದಾರೆ. ಈಗ ವೇಗವಾಗಿ ಹರಡುತ್ತಿರುವ ಒಮಿಕ್ರಾನ್ ಕಡಿಮೆ ಮಾರಣಾಂತಿಕವಾಗಿದೆ. ಹಾಗಾಗಿ ಲಾಕ್ ಡೌನ್, ಕರ್ಪ್ಯೂ ಮೂಲಕ ಅದನ್ನು ನಿಯಂತ್ರಿಸುವ ಬದಲು ಅದನ್ನು ಆದಷ್ಟು ಬೇಗ ಹರಡಲು ಬಿಡಬೇಕೆಂದು ಆ ಸೋ ಕಾಲ್ಡ್ ತಜ್ಞರು ಹೇಳಿದ್ದಾರೆ. ಇದಕ್ಕೆ ಅವರು ಕೊಡುವ ಕಾರಣ : ಒಮಿಕ್ರಾನ್ ಸಾಂಕ್ರಾಮಿಕವಾದ್ರೂ ಮಾರಣಾಂತಿಕವಲ್ಲ. ಸಾವಿನ ಸಂಖ್ಯೆ ಅತಿ ಕಡಿಮೆ. ಒಮಿಕ್ರಾನ್ ನಿಂದ ಜನರಲ್ಲಿ ಕೊರೋನಾ ವಿರುದ್ಧ ರೋಗ ನಿರೋಧಕ ಶಕ್ತಿ ಬೆಳೆಯುತ್ತದೆ. ಈ ರೋಗ ನಿರೋಧಕ ಶಕ್ತಿ ಬಹು ದೀರ್ಘಕಾಲ ದೇಹದಲ್ಲಿ ಇರುತ್ತದೆ. ಹಾಗಾದಲ್ಲಿ ಕೊರೊನಾ ಸಾಂಕ್ರಾಮಿಕದ ಅಂತ್ಯವು ವೇಗ ಪ್ರಾರಂಭವಾಗುತ್ತದೆ ಎಂದು ಈ ತಜ್ಞರು ಹೇಳಿದ್ದಾರೆ. ಹೀಗೆ ವಾದ ಮಂಡನೆ ಮಾಡಿದ ತಜ್ಞರಲ್ಲಿ ಅಮೆರಿಕದ ವೈದ್ಯ ಫೈನ್ ಇಮ್ರಾನಿ ಮೊದಲಿಗರು.

ಒಮಿಕ್ರಾನ್ ರೂಪಾಂತರವು ಡೆಲ್ಟಾಕ್ಕಿಂತ ಗಾಳಿಯಲ್ಲಿ 70 ಪಟ್ಟು ವೇಗವಾಗಿ ಚಲಿಸುತ್ತದೆ. ಆದರೆ ಇದು ಡೆಲ್ಟಾ ರೂಪಾಂತರದಂತೆ ಜನರನ್ನು ಹೆಚ್ಚು ಅನಾರೋಗ್ಯಕ್ಕೆ ಒಳಪಡಿಸುತ್ತಿಲ್ಲ. ಒಮಿಕ್ರಾನ್ ರೂಪಾಂತರವು ಶ್ವಾಸಕೋಶ ಮತ್ತು ಶ್ವಾಸನಾಳವನ್ನು ಸಂಪರ್ಕಿಸುವ ಶ್ವಾಸನಾಳದಲ್ಲಿ ವೇಗವಾಗಿ ಬೆಳೆಯುತ್ತದೆ. ಆದರೆ ಇದು ಶ್ವಾಸಕೋಶದ ಮೇಲೆ ಹೆಚ್ಚು ಪರಿಣಾಮ ಬೀರುವುದಿಲ್ಲ. ಒಮಿಕ್ರಾನ್, ಡೆಲ್ಟಾಕ್ಕಿಂತ ನಿಧಾನವಾಗಿ ಸೋಂಕನ್ನು ಹರಡುತ್ತದೆ ಎಂದು ವೈದ್ಯರು ಹೇಳಿದ್ದಾರೆ.

ಹಾಗಾಗಿ ಒಮಿಕ್ರಾನ್ ಸೋಂಕಿತ ಜನರಿಗೆ ಆಮ್ಲಜನಕದ ಬೆಂಬಲ ಅಗತ್ಯವಿಲ್ಲ. ಇದಲ್ಲದೆ, ನಮ್ಮ ಶ್ವಾಸನಾಳವು ಮ್ಯೂಕೋಸಲ್ ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೊಂದಿದೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಕೇಂದ್ರವಾಗಿದೆ. ಆದ್ದರಿಂದ ಒಮಿಕ್ರಾನ್ ಇಲ್ಲಿ ಹರಡಲು ಪ್ರಾರಂಭಿಸಿದ ತಕ್ಷಣ, ಈ ಕೇಂದ್ರವು ಸ್ವಯಂಚಾಲಿತವಾಗಿ ಸಕ್ರಿಯಗೊಳ್ಳುತ್ತದೆ ಮತ್ತು ಅದರಿಂದ ಬಿಡುಗಡೆಯಾಗುವ ಪ್ರತಿಕಾಯಗಳು ಒಮಿಕ್ರಾನ್ ಅನ್ನು ಕೊಲ್ಲುತ್ತವೆ. ಅಂದರೆ, ಒಮಿಕ್ರಾನ್ ದೇಹದಲ್ಲಿಯೇ ಗಂಭೀರ ಕಾಯಿಲೆಯಾಗಿ ಬೆಳೆಯಲು ಸಾಧ್ಯವಿಲ್ಲ. ಆದ್ದರಿಂದ ಒಮಿಕ್ರಾನ್ ಒಂದು ವರದಂತೆ ಎಂದು ತಜ್ಞರು ಹೇಳಿದ್ದಾರೆ.

ಹಾಗೆ ಒಮಿಕ್ರಾನ್ ನಿಂದ ಸಾವು ಸಂಭವಿಸುವುದಿಲ್ಲ ಎನ್ನಲು ಸಾಧ್ಯವಿಲ್ಲ ಎಂದು ಡಾ. ಇಮ್ರಾನಿ ಹೇಳಿದ್ದಾರೆ. ಈಗಾಗಲೇ ಕೆಲವು ಕಾಯಿಲೆಯಿಂದ ಬಳಲುತ್ತಿರುವ ಜನರ ಮೇಲೆ ಇದು ಪರಿಣಾಮ ಬೀರಬಹುದು. ಆದರೆ ಆರೋಗ್ಯವಂತ ಜನರು ಹೆಚ್ಚಿನ ಸಮಸ್ಯೆಯನ್ನು ಎದುರಿಸುವುದಿಲ್ಲ. ಒಮಿಕ್ರಾನ್ ಒಂದು ರೀತಿಯಲ್ಲಿ ನೈಸರ್ಗಿಕ ಲಸಿಕೆಯಾಗಲಿದೆ ಮತ್ತು ಸಾಂಕ್ರಾಮಿಕ ರೋಗದ ಅಂತ್ಯ ಖಚಿತ ಎಂದಿದ್ದಾರೆ.
ಆದ್ರೆ ಇದನ್ನು ಸಂಪೂರ್ಣವಾಗಿ ನಂಬಲು ಸಾಧ್ಯವಿಲ್ಲದಾಗಿದೆ. ಯಾಕೆಂದರೆ ಈ ಹಿಂದೆ ಕೊರೊನಾ ಆರಂಭದಲ್ಲಿಯೂ ಇಮ್ರಾನ್ ಸೇರಿದಂತೆ ಅನೇಕ ತಜ್ಞರು ಹೂಡಿದ್ದ ವಾದಗಳು ಸುಳ್ಳಾಗಿದ್ದವು. ಕೊರೊನಾ ಲಸಿಕೆ ಹಾಗೂ ಲಾಕ್ ಡೌನ್ ಅಗತ್ಯವಿಲ್ಲವೆಂದು ಇಮ್ರಾನ್ ಕೂಡ ವಾದಿಸಿದ್ದರು. ಆಗ ಅವರ ಲೆಕ್ಕಾಚಾರ ಉಲ್ಟಾ ಪಲ್ಟಾ ಆಗಿತ್ತು. ಲಕ್ಷಾಂತರ ಜನ ಕೊರೋನಾ ಕೈಲಿ ಹತರಾಗಿದ್ದರು.