ನಕ್ಷತ್ರದ ಹಂಗಿಲ್ಲದ 172 ಗ್ರಹಗಳು ಪತ್ತೆ !
ಭೂಮಿಯು ಹೇಗೆ ಸೂರ್ಯನ ಕಕ್ಷೆಯಲ್ಲಿ ಸುತ್ತುತ್ತದೋ, ಅದೇ ರೀತಿ ಉಳಿದ ಗ್ರಹಗಳೂ ನಕ್ಷತ್ರವೊಂದರ ಸುತ್ತ ಸುತ್ತುತ್ತವೆ.
ಆದರೆ, ಈಗ ಮೂಲ ನಕ್ಷತ್ರವೇ ಇಲ್ಲದ 70-172 ಗ್ರಹಗಳನ್ನು ಖಗೋಳವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ! ಈ ರೀತಿ ಮುಕ್ತವಾಗಿ ಸಂಚರಿಸುವಂತಹ ಇಷ್ಟೊಂದು ಗ್ರಹಗಳು ಒಂದೇ ಬಾರಿಗೆ ಪತ್ತೆಯಾಗಿರುವುದು ಇದೇ ಮೊದಲು. ಅಲ್ಲದೇ, ಈವರೆಗೆ ಪತ್ತೆಯಾದ ಮುಕ್ತ ಸಂಚಾರಿ ಗ್ರಹಗಳ ಸಂಖ್ಯೆಗೆ ಹೋಲಿಸಿದರೆ ಈ ಬಾರಿ ಇಂಥ ಗ್ರಹಗಳು ದುಪ್ಪಟ್ಟು ಸಂಖ್ಯೆಯಲ್ಲಿ ಕಂಡು ಬಂದಿರುವುದು ವಿಶೇಷ.
ಈ ಗ್ರಹಗಳ ಮೂಲವು ಇನ್ನೂ ನಿಗೂಢವಾಗಿಯೇ ಉಳಿದಿದೆ. ಸಾಮಾನ್ಯವಾಗಿ ನಕ್ಷತ್ರಗಳು ರೂಪುಗೊಳ್ಳುವಂಥ ಪ್ರಕ್ರಿಯೆಯ ವೇಳೆ ಈ ರೀತಿಯ ಗ್ರಹಗಳು ಸೃಷ್ಟಿಯಾಗುತ್ತವೆ. ಇದರ ದವರಾಶಿ ಗುರು ಗ್ರಹದ ದ್ರವ್ಯರಾಶಿಗಿಂತ 13 ಪಟ್ಟು ಕಡಿಮೆ ಇದ್ದು, ಯಾವುದೇ ನಕ್ಷತ್ರದ ಕಕ್ಷೆಯಲ್ಲಿ ಸುತ್ತುವುದಿಲ್ಲ. ಬದಲಿಗೆ ಸ್ವಂತವಾಗಿ ತೇಲುತ್ತಿರುತ್ತವೆ. ಈ ಅನ್ವೇಷಣೆಗೆ ಸಂಬಂಧಿಸಿದ ವರದಿಯು ನೇಚರ್ ಆಸ್ಥಾನಮಿ ನಿಯತಕಾಲಿಕೆಯಲ್ಲಿ ಪ್ರಕಟವಾಗಿದೆ.