ನೈಟ್ ಕರ್ಫ್ಯೂ ಬಗ್ಗೆ ಸಿ.ಟಿ.ರವಿ ಅತೃಪ್ತಿ : ಮೂಗು ಇರುವವರೆಗೆ ನೆಗಡಿ ತಪ್ಪಿದಲ್ಲ ,ಅನಗತ್ಯ ಭಯ ಸೃಷ್ಟಿ ಬೇಡ

Share the Article

ಚಿಕ್ಕಮಗಳೂರು: ಕೊರೋನಾ 3ನೇ ಅಲೆ ಮತ್ತು ಒಮಿಕ್ರೋನ್ ಸೋಂಕು ತಡೆಗೆ ಮಂಗಳವಾರದಿಂದ ರಾಜ್ಯ ಸರ್ಕಾರ ಜಾರಿಗೆ ತಂದಿರುವ ನೈಟ್ ಕರ್ಪ್ಯೂಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾವ್ಯದರ್ಶಿ ಸಿ.ಟಿ.ರವಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಚಿಕ್ಕಮಗಳೂರಿನಲ್ಲಿ ಸೋಮವಾರ ಪತ್ರಕರ್ತರ ಜತೆ ಮಾತನಾಡಿದ ಸಿ.ಟಿ.ರವಿ ಅವರು,ಮೂಗು ಇರುವವರೆಗೆ ನೆಗಡಿತಪ್ಪಿದ್ದಲ್ಲ. ಆತಂಕಪಡುವ ಅವಶ್ಯಕತೆ ಇಲ್ಲ, ಎಚ್ಚರಿಕೆ ವಹಿಸಬೇಕು.ಒಮಿಕ್ರಾನ್ ವೈರಾಣು ಬಗ್ಗೆ ಅನಗತ್ಯ ಭಯಬೇಡ. ಈ ಸೋಂಕುಬಂದರೂ ಚಿಕ್ಕದಾಗಿ ತೊಂದರೆಯಾಗುತ್ತದೆ ಎಂದು ದಕ್ಷಿಣ ಆಫ್ರಿಕಾ ಸೇರಿದಂತೆ ಬೇರೆ ಬೇರೆ ದೇಶದ ವೈರಾಲಜಿ ವಿಜ್ಞಾನಿಗಳು ಹೇಳಿದ್ದಾರೆ. ಜನಜೀವನಸಾಮಾನ್ಯವಾಗಿದ್ದು, ಅನಗತ್ಯ ಭಯಪಡಿಸು ವುದಕ್ಕೆ ಸರ್ಕಾರ ಕೈ ಹಾಕಬಾರದು ಎಂದರು.

ತಜ್ಞರು ಹೇಳಿರುವುದರಿಂದ ಅಭಿ ಪ್ರಾಯ ವ್ಯಕ್ತಪಡಿಸಿದ್ದೇನೆ ಎಂದು ಅವರು ಹೇಳಿದರು.

Leave A Reply