ಸರ್ವೆ ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ದರ್ಶನ ಬಲಿ ಉತ್ಸವ

Share the Article

ಸವಣೂರು : ಬ್ರಹ್ಮಕಲಶೋತ್ಸವ ನಡೆದ ಸರ್ವೆ ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ಡಿ.27ರಂದು ಶ್ರೀ ದೇವರ ಬಲಿ ಹೊರಟು ಉತ್ಸವ ನಡೆಯಿತು.

ಬೆಳಿಗ್ಗೆ ನಾಗಸನ್ನಿಧಾನದಲ್ಲಿ ಕಲಶಾಭಿಷೇಕ, ತಂಬಿಲ ನಡೆಯಿತು.ದೇವಳದಲ್ಲಿ ಶ್ರೀ ದೇವರ ಬಲಿ ಹೊರಟು ಉತ್ಸವ, ದರ್ಶನ ಬಲಿ, ಬಟ್ಟಲು ಕಾಣಿಕೆ
ಮಧ್ಯಾಹ್ನಶ್ರೀದೇವರ ಮಹಾಪೂಜೆ, ಅನ್ನಸಂತರ್ಪಣೆ ನಡೆಯಿತು.

ಸಂಜೆ ದೈವಗಳ ಭಂಡಾರ ತೆಗೆದು,ಲೋಕ ಕಲ್ಯಾಣಾರ್ಥವಾಗಿ ನಾಗಸಂಪ್ರೀತಿಗಾಗಿ `ನಾಗ ತನು ತರ್ಪಣ ಸೇವೆ ನಡೆಯಲಿದೆ,ರಾತ್ರಿ ತನು ತರ್ಪಣ ಸೇವೆ ,ರಾತ್ರಿ ಅನ್ನಸಂತರ್ಪಣೆ ,ಕ್ಷೇತ್ರದ ದೈವಗಳ ನರ್ತನ ಸೇವೆ ನಡೆಯಿತು.

Leave A Reply