ಹೆಜ್ಜೇನು ದಾಳಿ : ಅಬಕಾರಿ ಇಲಾಖೆಯ ಸಿಬ್ಬಂದಿ ಮೃತ್ಯು

Share the Article

ಉತ್ತರಕನ್ನಡ : ಅಂಕೋಲ ತಾಲೂಕಿನ ಅಜ್ಜಿಕಟ್ಟಾ ಬಳಿ ಹೆಜ್ಜೇನು ದಾಳಿಗೆ ಸಿಲುಕಿ ತೀವ್ರವಾಗಿ ಅಸ್ವಸ್ಥಗೊಂಡು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯಲ್ಲಾಪುರ ನಿವಾಸಿ ಅಂಕೋಲಾ ಅಬಕಾರಿ ನಿರೀಕ್ಷಕರ ಕಚೇರಿಯಲ್ಲಿ ಮುಖ್ಯ ಪೇದೆಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಹಸನ್ ಖಾನ್ ಕರೀಂ ಖಾನ್ (45) ಮೃತಪಟ್ಟಿದ್ದಾರೆ.

ಹಸನ್ ಕರೀಂ ಖಾನ್ ಅವರು ಬುಧವಾರ ಮಧ್ಯಾಹ್ನ ಊಟ ತರಲು ಹೋಗಿದ್ದ ಸಂದರ್ಭದಲ್ಲಿ ಭಾರಿ ಪ್ರಮಾಣದಲ್ಲಿ ಹೆಜ್ಜೇನು ಕಡಿತ ಮಾಡಿದ್ದರಿಂದ ಅವರನ್ನು ತಾಲೂಕಿನ ಆಸ್ಪತ್ರೆಗೆ ದಾಖಲಿಸಿ ತಕ್ಷಣ ಹೆಚ್ಚಿನ ಚಿಕಿತ್ಸೆಗೆ ಕಾರವಾರದ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಗುರುವಾರ ಮೃತ ಪಟ್ಟರು ಎನ್ನಲಾಗಿದೆ.

Leave A Reply