Home News ಕಾರಿಂಜೇಶ್ವರ ಬೆಟ್ಟಕ್ಕೆ ಪಶ್ಚಿಮ ಘಟ್ಟ ಸಂರಕ್ಷಣಾ ಕಾರ್ಯಪಡೆಯ ಅಧ್ಯಕ್ಷ ಶಾಂತೆಯಂಡ ರವಿ ಕುಶಾಲಪ್ಪ ಭೇಟಿ

ಕಾರಿಂಜೇಶ್ವರ ಬೆಟ್ಟಕ್ಕೆ ಪಶ್ಚಿಮ ಘಟ್ಟ ಸಂರಕ್ಷಣಾ ಕಾರ್ಯಪಡೆಯ ಅಧ್ಯಕ್ಷ ಶಾಂತೆಯಂಡ ರವಿ ಕುಶಾಲಪ್ಪ ಭೇಟಿ

Hindu neighbor gifts plot of land

Hindu neighbour gifts land to Muslim journalist

ಬಂಟ್ವಾಳ : ದ.ಕ.ಜಿಲ್ಲೆಯ ಬಂಟ್ವಾಳ‌ ತಾಲೂಕಿನ ಕಾರಿಂಜೇಶ್ವರ ಬೆಟ್ಟಕ್ಕೆ ಪಶ್ಚಿಮಘಟ್ಟ ಸಂರಕ್ಷಣಾ ಕಾರ್ಯಪಡೆಯ ಅಧ್ಯಕ್ಷ ಶಾಂತೆಯಂಡ ರವಿ ಕುಶಾಲಪ್ಪ ಅವರು ಬುಧವಾರ ಭೇಟಿ ನೀಡಿ,ಅಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯನ್ನು ನಿಲ್ಲಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಕಾರಿಂಜೇಶ್ವರ ಕ್ಷೇತ್ರದಲ್ಲಿನ ಸರಕಾರಿ ಗೋಮಾಳವನ್ನು ಒತ್ತುವರಿ ಮಾಡಿಕೊಂಡು ಸ್ಫೋಟಕ ಸಿಡಿಸಿ,‌ಪುರಾತನ ಕಾರಿಂಜೇಶ್ವರ ಶಿವ ಪಾರ್ವತಿ ದೇವಾಲಯಕ್ಕೆ ಹಾನಿಯಾಗಿರುವುದನ್ನು ಅವರು ಪರಿಶೀಲನೆ ನಡೆಸಿದರು.

ಈ‌ ಸಂದರ್ಭದಲ್ಲಿ ಹಿಂದು ಜಾಗರಣಾ ವೇದಿಕೆಯ ಪ್ರಾಂತ ಸಂಘಟನಾ ಕಾರ್ಯದರ್ಶಿ ಪ್ರಶಾಂತ್, ದ.ಕ.ಉಸ್ತುವಾರಿ ಸಚಿವರ ಆಪ್ತ ಸಹಾಯಕ ಸುಧಾಕರ್, ಅರಣ್ಯ, ಕಂದಾಯ ಅಧಿಕಾರಿಗಳು ದೇವಾಲಯ ಆಡಳಿತ ಮಂಡಳಿಯ ಅಧ್ಯಕ್ಷರು, ಸ್ಥಳೀಯ ಪಂಚಾಯತಿ ಪ್ರಮುಖರು, ಸಂಘಟನೆ ಪ್ರಮುಖರು, ಕಾರ್ಯಕರ್ತರು ಗ್ರಾಮಸ್ಥರು ಉಪಸ್ಥಿತರಿದ್ದರು.