ಕಡಬ : ಕಾರ್ಮಿಕರಿಂದ ಮೊಬೈಲ್ ಪಡೆದು ಪರಾರಿ

Share the Article

ಕಡಬ : ಇಲ್ಲಿನ ಮಿನಿ ವಿಧಾನಸೌಧದ ಕಟ್ಟಡ ಕಾಮಗಾರಿ ಮಾಡುತ್ತಿದ್ದ ಹಿಂದಿ ಭಾಷಿಗ ಕಾರ್ಮಿಕರ ಮೊಬೈಲ್ ನ್ನು ಬೈಕ್ ನಲ್ಲಿ ಬಂದ ಅಪರಿಚಿತರು ಎಗರಿಸಿಕೊಂಡು ಪರಾರಿಯಾದ ಘಟನೆ ಕಡಬದಲ್ಲಿ ಬುಧವಾರದಂದು ಸಂಜೆ ನಡೆದಿದೆ.

ಕಡಬ ತಹಶೀಲ್ದಾರ್ ಕಛೇರಿಯ ಹಿಂಭಾಗದಲ್ಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದು, ಅಲ್ಲಿಗೆ ಬೈಕ್ ನಲ್ಲಿ ಬಂದ ಅಪರಿಚಿತರು ತುರ್ತು ಕರೆಯನ್ನು ಮಾಡಲು ಮೊಬೈಲ್ ಕೊಡುವಂತೆ ಕೇಳಿದ್ದಾರೆ.

ಅದರಂತೆ ಕಾರ್ಮಿಕರು ಮೊಬೈಲ್ ಕೊಟ್ಟಿದ್ದಾರೆ. ಮೊಬೈಲ್ ಸಿಗುತ್ತಿದ್ದಂತೆಯೇ ಯುವಕರು ಪರಾರಿಯಾಗಿದ್ದು, ಕಡಬ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Leave A Reply