ದಕ್ಷಿಣ ಕನ್ನಡ ಕಾರ್ಯ ನಿರತ ಸಂಘದ ಜಿಲ್ಲಾ ಸಮ್ಮೇಳನದ ಲಾಂಛನ ಬಿಡುಗಡೆ | ದ.ಕ ಜಿಲ್ಲಾ ಪತ್ರಕರ್ತರ ಸಮ್ಮೇಳನ ಮಾದರಿ ಸಮ್ಮೇಳನ ವಾಗಿ ಮೂಡಿ ಬರಲಿ- ಡಾ.ಡಿ.ವೀರೇಂದ್ರ ಹೆಗ್ಗಡೆ

Share the Article

ಧರ್ಮಸ್ಥಳ: ದಕ್ಷಿಣ ಕನ್ನಡ ಪತ್ರಕರ್ತರ ಸಮ್ಮೇಳನ ಮಾದರಿ ಯಶಸ್ವಿ ಸಮ್ಮೇಳನ ವಾಗಿ ಮೂಡಿಬರಲಿ ಎಂದು ಶ್ರೀ ಧರ್ಮ‌ಸ್ಥಳ ಕ್ಷೇತ್ರದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ‌ಹೆಗ್ಗಡೆ ಹೇಳಿದ್ದಾರೆ.ಮಂಗಳೂರಿನ ಕುದ್ಮುಲ್ ರಂಗರಾವ್ ಸಭಾಂಗಣದಲ್ಲಿ ಡಿ.28 ರಂದು ನಡೆಯಲಿರುವ ದಕ್ಷಿಣ ಕನ್ನಡ ಕಾರ್ಯ ನಿರತ ಸಂಘದ ಜಿಲ್ಲಾ ಸಮ್ಮೇಳನದ ಲಾಂಛನ ವನ್ನು ‌ಸೋಮವಾರ ಧರ್ಮ‌ಸ್ಥಳದಲ್ಲಿ ಬಿಡುಗಡೆಗೊಳಿ‌ಸಿ ಅವರು ಮಾತನಾಡಿದರು.

ದ.ಕ ಜಿಲ್ಲಾ ಕಾರ್ಯ ನಿರತ ಷತ್ರಕರ್ತರ ಸಂಘ ಕ್ರೀಯಾಶೀಲ ಚಟುವಟಿಕೆ ಗಳಲ್ಲಿ ತೊಡಗಿರುವುದನ್ನು ಗಮನಿಸಿದ್ದೇನೆ. ಕಳೆದ ಬಾರಿ ಮಾದರಿಯಾದ ರಾಜ್ಯ ‌ಸಮ್ಮೇಳನದಲ್ಲಿ ಪತ್ರಕರ್ತರು ಉತ್ಸಾಹ ದಿಂದ ಭಾಗ ವಹಿಸಿರುವುದನ್ನ ಗಮನಿ‌ಸಿದ್ದೇನೆ.ಈ ಬಾರಿಯೂ ಸಮ್ಮೇಳನ ಯಶಸ್ವಿಯಾಗಲಿ ಎಂದು ಅವರು ಹಾರೈಸಿದರು.

ಈ ಸಂದರ್ಭದಲ್ಲಿ ದ.ಕ.ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಸಂಘದ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ,ಕೋಶಾಧಿಕಾರಿ ಪುಷ್ಪ ರಾಜ್ ಬಿ.ಎನ್, ಕಾರ್ಯಕಾರಿ ಸಮಿತಿ ಸದಸ್ಯ ಭಾಸ್ಕರ್ ರೈ ಕಟ್ಟ, ರಾಜೇಶ್ ದಡ್ಡಂಗಡಿ ,ಬೆಳ್ತಂಗಡಿ ತಾಲೂಕು ಕಾರ್ಯ ನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳಾದ ಮನೋಹರ ಬಳಂಜ, ಎನ್.ಆರ್.ಪೂವಣಿ ಉಪಸ್ಥಿತರಿದ್ದರು‌.

ಶಾಸಕರಿಂದ ಸಮ್ಮೇಳನ ಮಾಹಿತಿ ಪತ್ರ ಬಿಡುಗಡೆ

ಬೆಳ್ತಂಗಡಿ ವಿಧಾನ ‌ಸಭಾ ಕ್ಷೇತ್ರದ ಶಾಸಕ ಹರೀಶ್ ಪೂಂಜ ದ.ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನಡೆಯುವ ಸಮ್ಮೇಳನದ ಮಾಹಿತಿ ಪತ್ರವನ್ನು ಬೆಳ್ತಂಗಡಿ ಯಲ್ಲಿಂದು ಬಿಡುಗಡೆ ಗೊಳಿಸಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ದ.ಕ ಜಿಲ್ಲಾ ಪತ್ರಕರ್ತ ರ ಸಂಘದ ಅಧ್ಯಕ್ಷ ಶ್ರೀ ನಿವಾಸ ನಾಯಕ್ ಇಂದಾಜೆ, ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಅಚ್ಚುಶ್ರೀ ಬಂಗೇರ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

Leave A Reply