ಬಿ.ಸಿ.ರೋಡ್ : ಸಾಲ ಬಾಧೆಯಿಂದ ಉದ್ಯಮಿ ನೇಣು ಬಿಗಿದು ಆತ್ಮಹತ್ಯೆ

Share the Article

ಮಂಗಳೂರು : ಸಾಲದ ಬಾಧೆ ಎಂಬ ಕಾರಣಕ್ಕಾಗಿ ಚೀಟಿ ಬರೆದು ಉದ್ಯಮಿಯೋರ್ವರು ಲಾಡ್ಜ್ ಒಂದರಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬಂಟ್ವಾಳದ ಬಿಸಿ ರೋಡ್‌ನಲ್ಲಿ ಆದಿತ್ಯವಾರ ಬೆಳಕಿಗೆ ಬಂದಿದೆ.

ಬಂಟ್ವಾಳ ತಾಲೂಕಿನ ಕನಪಾದೆ ನಿವಾಸಿ ಕೃಷ್ಣ ಟಿ. ಎಂಬವರು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.

ಬಿ.ಸಿರೋಡಿನ ಖಾಸಗಿ ಹೋಟೆಲ್ ನ ರೂಮ್ ನಲ್ಲಿ ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇವರು ಐಸ್ ಕ್ರೀಂ ಒಂದರ ಮಾಲಕರಾಗಿದ್ದು ಜೊತೆಗೆ ಕ್ಲಬ್ ಕೂಡಾ ನಡೆಸುತ್ತಿದ್ದರು ಎಂದು ಹೇಳಲಾಗಿದೆ. ಉದ್ಯಮ ದಲ್ಲಿ ನಷ್ಟವಾಗಿದ್ದು, ಸಾಲದಬಾಧೆಯಿಂದ ಬಳಲುತ್ತಿದ್ದರು ಎಂಬ ಕಾರಣವನ್ನು ಚೀಟಿಯಲ್ಲಿ ಬರೆದು ಕಿಸೆಯಲ್ಲಿಟ್ಟಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

ಬಂಟ್ವಾಳ ನಗರ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

Leave A Reply