Home News ಸದ್ಯಕ್ಕಿಲ್ಲ ಹೊಸ ಬಿಪಿಎಲ್ ಕಾರ್ಡ್ ಹಂಚಿಕೆ !! | ‘ಅನರ್ಹರ ಪತ್ತೆ ಮೊದಲು, ಪಡಿತರ ಚೀಟಿ...

ಸದ್ಯಕ್ಕಿಲ್ಲ ಹೊಸ ಬಿಪಿಎಲ್ ಕಾರ್ಡ್ ಹಂಚಿಕೆ !! | ‘ಅನರ್ಹರ ಪತ್ತೆ ಮೊದಲು, ಪಡಿತರ ಚೀಟಿ ವಿತರಣೆ ನಂತರ ‘ ನಿಲುವು ತಾಳಿದ ಆಹಾರ ಇಲಾಖೆ

Hindu neighbor gifts plot of land

Hindu neighbour gifts land to Muslim journalist

ಅಕ್ರಮವಾಗಿ ಪಡೆದಿರುವ ಬಿಪಿಎಲ್ ಕಾರ್ಡ್ ಗಳನ್ನು ಆರ್ಥಿಕ ಸಬಲರು ವಾಪಸ್ ಕೊಟ್ಟ ನಂತರವಷ್ಟೇ ಹೊಸ ಅರ್ಜಿದಾರರಿಗೆ ಕಾರ್ಡ್ ವಿತರಿಸಲು ಆಹಾರ ಇಲಾಖೆ ನಿರ್ಧರಿಸಿದ್ದು, ಇದರಿಂದಾಗಿ ಹೊಸ ಬಿಪಿಎಲ್ ಕಾರ್ಡ್‌ಗೆ ಅರ್ಜಿ ಸಲ್ಲಿಸಿರುವ ಕುಟುಂಬಗಳು ಕಾರ್ಡ್ ಗಾಗಿ ಇನ್ನಷ್ಟು ದಿನ ಕಾಯುವುದು ಅನಿವಾರ್ಯವಾಗಿದೆ.

ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (ಎನ್‌ಎಫ್‌ಎಸ್‌) ಪ್ರಕಾರ ಗ್ರಾಮೀಣ ಪ್ರದೇಶದಲ್ಲಿ ಶೇ.76.04, ನಗರ ಪ್ರದೇಶಗಳ ಶೇ.49.36 ಸೇರಿ ಒಟ್ಟು 3,71,78,287 ಕುಟುಂಬಗಳ ಸದಸ್ಯರಿಗೆ ಬಿಪಿಎಲ್ ಕಾರ್ಡ್ ನೀಡಬೇಕಿದೆ. ಆದರೆ, ರಾಜ್ಯದಲ್ಲೀಗ ಒಟ್ಟು 3,78,67,521ಕ್ಕೆ ಬಿಪಿಎ ಸದಸ್ಯರಿದ್ದಾರೆ. ಇದರಲ್ಲಿ 6,89,234 ಹೆಚ್ಚಿನ ಸದಸ್ಯರು ಅಂದರೆ 3.5 ಲಕ್ಷಕ್ಕೂ ಹೆಚ್ಚಿನ ಬಿಪಿಎಲ್ ಕಾರ್ಡ್‌ಗಳಿವೆ. ಹಾಗಾಗಿ, ಇಲಾಖೆ ‘ಅನರ್ಹರ ಪತ್ತೆ ಮೊದಲು; ಪಡಿತರ ಚೀಟಿ ವಿತರಣೆ ನಂತರ’ ಎಂಬ ನಿಲುವು ಅನುಸರಿಸುತ್ತಿದೆ.

4 ಲಕ್ಷ ಅರ್ಜಿ ಬಾಕಿ:

2017-21ರವರೆಗೆ ರಾಜ್ಯಾದ್ಯಂತ ಬಿಪಿಎಲ್‌ ಕಾರ್ಡ್‌ಗಾಗಿ 39,02,745 ಅರ್ಜಿ ಸಲ್ಲಿಕೆಯಾಗಿದ್ದು, 34,97,529 ಅರ್ಜಿ ವಿಲೇವಾರಿಯಾಗಿವೆ. 4,05,216 ಬಾಕಿ ಉಳಿದಿವೆ. ಆರ್ಥಿಕ ಸಬಲರು ಪಡೆದಿದ್ದ ರೇಷನ್ ಕಾರ್ಡ್‌ಗಳ ಪಟ್ಟಿಯಲ್ಲಿ 3,55,516 ಕಾರ್ಡ್ ಅನರ್ಹಗೊಳಿಸಲಾಗಿದೆ. 85,204 ಆದಾಯ ತೆರಿಗೆ ಪಾವತಿದಾರ ಕುಟುಂಬಗಳು, 2,127 ಸರ್ಕಾರಿ ನೌಕರರು 3 ಹೆಕ್ಟೇರ್‌ಗಿಂತ ಹೆಚ್ಚು ಜಮೀನು ಹೊಂದಿರುವ 2,18,165 ಕುಟುಂಬಗಳು ಹಾಗೂ 1.20 ಲಕ್ಷ ರೂ.ಗಿಂತ ಹೆಚ್ಚು ವಾರ್ಷಿಕ ಆದಾಯ ಹೊಂದಿರುವ 50,060 ಕುಟುಂಬಗಳ ಕಾರ್ಡ್ ರದ್ದುಪಡಿಸಲಾಗಿದೆ. 27,527 ಅಂತ್ಯೋದಯ, 3,28,178 ಬಿಪಿಎಲ್ ಕಾರ್ಡ್ ರದ್ದಾಗಿವೆ. 7,413 ಅಂತ್ಯೋದಯದಿಂದ ಬಿಪಿಎಲ್ ಕಾರ್ಡ್‌ಗೆ ಹಾಗೂ 1,09,790 ಬಿಪಿಎಲ್ ಕಾರ್ಡ್‌ನಿಂದ ಎಪಿಎಲ್ ಕಾರ್ಡ್‌ಗೆ ಪರಿವರ್ತಿಸಲಾಗಿದೆ. 1,17,203 ಕುಟುಂಬಗಳನ್ನು ಬೇರೆ ಬೇರೆ ಆದ್ಯತೆ ಹಾಗೂ ಆದ್ಯತೆಯೇತರ ವಲಯಕ್ಕೆ ಪರಿವರ್ತಿಸಲಾಗಿದೆ.