Home Fashion ದೃಷ್ಟಿಹೀನ ಪತ್ರಿಕೋದ್ಯಮ ವಿದ್ಯಾರ್ಥಿನಿಯಿಂದ ಅದ್ಭುತ ಛಾಯಾಗ್ರಹಣ | ಕಣ್ಣು ಕುರುಡಾದರೂ ಕ್ಯಾಮರಾದ ಕಣ್ಣಿನಿಂದ ಸೆರೆಹಿಡಿದಿದ್ದಾಳೆ ಅದ್ಭುತ...

ದೃಷ್ಟಿಹೀನ ಪತ್ರಿಕೋದ್ಯಮ ವಿದ್ಯಾರ್ಥಿನಿಯಿಂದ ಅದ್ಭುತ ಛಾಯಾಗ್ರಹಣ | ಕಣ್ಣು ಕುರುಡಾದರೂ ಕ್ಯಾಮರಾದ ಕಣ್ಣಿನಿಂದ ಸೆರೆಹಿಡಿದಿದ್ದಾಳೆ ಅದ್ಭುತ ಚಿತ್ರಗಳನ್ನು

Hindu neighbor gifts plot of land

Hindu neighbour gifts land to Muslim journalist

ಮನುಷ್ಯನಿಗೆ ಛಲವೊಂದಿದ್ದರೆ ಸಾಕು ಏನನ್ನು ಸಾಧಿಸಬಲ್ಲ. ಉತ್ತಮವಾದ ಗುರಿಯನ್ನು ಇಟ್ಟುಕೊಂಡು ಒಳ್ಳೆಯ ಮಾರ್ಗದ ಕಡೆಗೆ ನಡೆದರೆ ಯಾವುದೂ ಕಠಿಣವಲ್ಲ.ಹೌದು. ಇದಕ್ಕೆಲ್ಲ ಉತ್ತಮವಾದ ಉದಾಹರಣೆ ಎಂಬಂತೆ ಇದೆ ಈಕೆಯ ಸಾಧನೆ.

ಸಾಮಾನ್ಯವಾಗಿ ಫೋಟೋಗ್ರಫಿ ಎಂಬುದು ಕಣ್ಣಿನಿಂದ ಗುರಿಯನ್ನು ಇಟ್ಟುಕೊಂಡು ಅದ್ಭುತವಾದ ದೃಶ್ಯಗಳನ್ನು ಕ್ಲಿಕ್ ಮಾಡುವುದಾಗಿದೆ. ಆದರೆ ಇದಕ್ಕೆ ಕಣ್ಣಿದ್ದರೆ ಮಾತ್ರ ಒಳ್ಳೆಯ ಚಿತ್ರಣ ಬರಲು ಸಾಧ್ಯ ಎಂದು ನೀವು ಅಂದುಕೊಂಡರೆ ಅದು ತಪ್ಪು.

ಯಾಕಂದ್ರೆ ಈಜಿಪ್ಟ್ ಪತ್ರಿಕೋದ್ಯಮದ ವಿದ್ಯಾರ್ಥಿನಿ ಇಸ್ರಾ ಇಸ್ಮಾಯಿಲ್ ತನ್ನ ವಿಶೇಷ ಫೋಟೋಗ್ರಾಫಿಯಿಂದಲೇ ಈಗ ಇಡೀ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಾಳೆ. ವಿಶೇಷ ಅಂದ್ರೆ 22 ರ ಹರೆಯದ ಈ ಹುಡುಗಿಗೆ ಕಣ್ಣೆ ಕಾಣೋದಿಲ್ಲ.

ಇಸ್ರಾ ಇಸ್ಮಾಯಿಲ್ ಛಾಯಾಗ್ರಾಹಣ ಮಾಡಲೇಬೇಕು ಅಂತ ಪತ್ರಿಕೋದ್ಯಮ ಆಯ್ದುಕೊಂಡಿದ್ದಾಳೆ.ಆದರೆ ಈಕೆಗೆ ಕಣ್ಣು ಕಾಣೋದಿಲ್ಲ. ಆದರೂ ಛಲ ಬಿಡದೆ ಫೋಟೋಗ್ರಾಫಿ ಮಾಡ್ತಾಳೆ.ಇದಕ್ಕೆ ನೆರವಾಗಿರೋದು ಈಕೆಯ ಶ್ರವಣ ಶಕ್ತಿ ಮತ್ತು ಸ್ಪರ್ಶ ಜ್ಞಾನವೇ ಆಗಿವೆ.

ಈ ಒಂದು ಟೆಕ್ನಿಕ್‌ನಿಂದಲೇ ಇಸ್ರಾ ಇಸ್ಮಾಯಿಲ್ ಈಗ ಫೋಟೋ ತೆಗೆಯುತ್ತಾರೆ. ವಿಶೇಷವೆಂದ್ರೆ ಹೀಗೆ ಫೋಟೋ ತೆಗೆಯುತ್ತಿರೋ ವೀಡಿಯೋನೇ ವೈರಲ್ ಆಗಿ ಬಿಟ್ಟಿದ್ದು,ಛಾಯಾಗ್ರಾಹಕ ಖಲೀದ್ ಫರೀದ್ ರಿಂದಲೇ ಇಸ್ರಾ ಫೋಟೋಗ್ರಾಫಿ ಕಲಿಯುತ್ತಿದ್ದಾರೆ.